Jack Dorsey: ಇಂಟರ್ನೆಟ್, ವೈಫೈ ಇಲ್ಲದೆ ಬಳಸೋ ಹೊಸ ಮೆಸೆಂಜರ್ App ಕಂಡುಹಿಡಿದ ಟ್ವಿಟ್ಟರ್ ಸ್ಥಾಪಕ – ಡೌನ್ಲೋಡ್ ಮಾಡುವುದು ಹೇಗೆ?

Jack Dorsey: ಟ್ವಿಟರ್ನ (ಇಂದಿನ ಎಕ್ಸ್) ಸಹ ಸ್ಥಾಪಕ ಜಾಕ್ ಡೋರ್ಸಿ ಇದೀಗ ಹೊಸ ಆವಿಷ್ಕಾರದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇಂದು ಎಲ್ಲವೂ ಇಂಟರ್ನೆಟ್ ಮಯವಾಗುತ್ತಿರುವ ಹೊತ್ತಿನಲ್ಲಿಯೇ, ಇಂಟರ್ನೆಟ್ ಇಲ್ಲದೆ ಏನೂ ಆಗಲಾರದು ಎನ್ನುವಾಗಲೇ ಯಾವ ನೆಟ್ ಹಾಗೂ ಡಾಟಾ ಇಲ್ಲದೆಯೇ ಬಳಸಬಹುದಾದಂತಹ ಹೊಸ ಮೆಸೆಂಜರ್ ಆಪ್ ಅನ್ನು ಇವರು ಕಂಡುಹಿಡಿದಿದ್ದಾರೆ ಎನ್ನಲಾಗಿದೆ.

ಹೌದು, ಇಂಟರ್ನೆಟ್ ಇಲ್ಲದೇ, ಸೆಟ್ಲೈಟ್ ಸಂಪರ್ಕ ಇಲ್ಲದೇ, ವೈಫೈನೂ ಇಲ್ಲದೇ ಕಾರ್ಯನಿರ್ವಹಿಸಬಹುದಾದ ಹೊಸ ಮೆಸೆಂಜರ್ ಆಯಪ್ ಒಂದನ್ನು ಡೋರ್ಸಿ ಅವರು ಅಭಿವೃದ್ಧಿಪಡಿಸಿರುವುದಾಗಿ ತಿಳಿದುಬಂದಿದೆ. ಅದರ ಹೆಸರು ಬಿಟ್ ಚಾಟ್ (BitChat) ಎಂಬ ಪಿ2ಪಿ. ಸದ್ಯ ಈ ಆಯಪ್ ಆಯಪಲ್ ಐ ಸ್ಟೋರ್ನಲ್ಲಿ ಟೆಸ್ಟ್ ಮೋಡ್ನಲ್ಲಿ ಮಾತ್ರ ಲಭ್ಯವಿದೆ.
ಅಂದಹಾಗೆ ಬಿಟ್ ಚಾಟ್ ಟೆಸ್ಟ್ ಮೋಡ್ನಲ್ಲಿ ಹಲವರು ಚಾಟ್ ಮಾಡಿರುವ ಸ್ಕ್ರೀನ್ ಶಾಟ್ಗಳು ಆನ್ಲೈನ್ಲ್ಲಿ ಗಮನ ಸೆಳೆದಿವೆ. ಕ್ರಿಪ್ಟೊ ಕರೆನ್ಸಿ ಆಯಪ್ಗಳಲ್ಲಿ ಬಳಕೆಯಾಗುತ್ತಿದ್ದ ತಂತ್ರಜ್ಞಾನವ್ನೇ ಸುಧಾರಿಸಿ ಈ ಹೊಸ ಆಯಪ್ ತರಲಾಗಿದ್ದು, ಮೊಬೈಲ್, ಇತರ ಡಿವೈಸ್ಗಳಲ್ಲಿನ ಬ್ಲೂಟೂತ್ ಮೂಲಕವೇ ಒಂದು ಸಾಧನದಿಂದ ಇನ್ನೊಂದು ಸಾಧನವನ್ನು ಪಿ2ಪಿ ನೆಟ್ವರ್ಕ್ ಮೂಲಕ ಇದು ಸಂಪರ್ಕ ಸಾಧಿಸುತ್ತದೆ ಎನ್ನಲಾಗಿದೆ. ಈ ಕುರಿತು ಹಲವು ಟೆಕ್ ಮಾಧ್ಯಮಗಳು ವರದಿ ಮಾಡಿವೆ.
ಇನ್ನು 2022 ರಲ್ಲಿ ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಜಾಕ್ ಅಲ್ಲಿಂದ ಹೊರ ಬಿದ್ದಿದ್ದರು. ಅವರು ಈಗ ಅಭಿವೃದ್ಧಿಪಡಿಸಿರುವ ಬಿಟ್ ಚಾಟ್ ಯಶಸ್ವಿಯಾದರೇ ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿಯಾಗುವುದಂತೂ ಪಕ್ಕಾ!!
Comments are closed.