Bank: ಇನ್ನು ಬ್ಯಾಂಕ್‌ಗಳಲ್ಲಿ ಕನ್ನಡದಲ್ಲೇ ವ್ಯವಹಾರ, ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿಗೆ ಮುಂದಾದ BoB!

Bank: ಸ್ಥಳೀಯ ಭಾಷಾ ಕೌಶಲ್ಯದ ಕೊರತೆಯನ್ನು ನೀಗಿಸಲು ಸರ್ಕಾರಿ ಬ್ಯಾಂಕುಗಳು ಸ್ಥಳೀಯ ಬ್ಯಾಂಕ್ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿವೆ ಮತ್ತು ಸಿಬ್ಬಂದಿಗೆ ಭಾಷಾ ತರಬೇತಿ ನೀಡುತ್ತಿವೆ. ಗ್ರಾಹಕ ಸೇವೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸ್ಥಳೀಯ ಭಾಷಾ ಕೌಶಲ್ಯದ ಕೊರತೆಯಿಂದಾಗಿ ಗ್ರಾಹಕರು ವಿಶೇಷವಾಗಿ ಶಾಖೆಯ ಸಿಬ್ಬಂದಿಗಳ ಜೊತೆ ಅನಾನುಕೂಲತೆ ಎದುರಿಸುತ್ತಿರುವ ನಡುವೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ನಿರ್ದಿಷ್ಟ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಪ್ರವೀಣ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಮತ್ತು ಗ್ರಾಹಕ ಸೇವೆಯನ್ನು ಹೆಚ್ಚಿಸಲು ಇರುವ ಸಿಬ್ಬಂದಿಗಳಿಗೆ ಸ್ಥಳೀಯ ಭಾಷಾ ತರಬೇತಿಯನ್ನು ನೀಡಲು ಮುಂದಾಗುತ್ತಿವೆ.
ಕಳೆದ ವಾರ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (BoB) ಭಾರತದಾದ್ಯಂತ 2,500 ‘ಸ್ಥಳೀಯ ಬ್ಯಾಂಕ್ ಅಧಿಕಾರಿಗಳನ್ನು’ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಜಾಹೀರಾತು ನೀಡಿದೆ, ಇದರಲ್ಲಿ ಗುಜರಾತ್‌ನಲ್ಲಿ 1,160, ಮಹಾರಾಷ್ಟ್ರದಲ್ಲಿ 485 ಮತ್ತು ಕರ್ನಾಟಕದಲ್ಲಿ 450 ಹುದ್ದೆಗಳು ಸೇರಿವೆ. ಬ್ಯಾಂಕುಗಳೊಂದಿಗಿನ ಗ್ರಾಹಕರ ಸಂವಹನದಲ್ಲಿನ ಭಾಷಾ ಸವಾಲುಗಳನ್ನು ನಿವಾರಿಸಲು ಹೆಚ್ಚುತ್ತಿರುವ ಬೇಡಿಕೆಯ ನಡುವೆ ಸ್ಥಳೀಯ ಭಾಷೆಗಳಲ್ಲಿ ಸ್ಫುಟವಾಗಿ ಮಾತನಾಡಲು ಬರಬೇಕು ಅನ್ನೋದನ್ನೇ ಅರ್ಹತಾ ಮಾನದಂಡವನ್ನಾಗಿ ಮಾಡಲಾಗಿದೆ.
“ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ (ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದು) ಪ್ರವೀಣರಾಗಿರಬೇಕು” ಎಂದು BoB ನೇಮಕಾತಿ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಈ ಉದ್ಯೋಗಗಳಿಗೆ ಸ್ಪರ್ಧಿಸುವವರು ಒಂದು ನಿರ್ದಿಷ್ಟ ರಾಜ್ಯದಲ್ಲಿ ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Mangaluru: ದ.ಕ.ಜಿ.ಪಂ ನೂತನ ಸಿಇಒ ಆಗಿ ನಾರ್ವಾಡೆ ವಿನಾಯಕ್!
Comments are closed.