Mangaluru: ಮಂಗಳೂರು: ಯುವತಿ ನಾಪತ್ತೆ!

Share the Article

Mangaluru: ನಂದಿಗುಡ್ಡೆಯ ಆಶ್ರಮವೊಂದರಲ್ಲಿ ಕೇರ್ ಟೇಕರ್ ಆಗಿದ್ದ ದಾವಣಗೆರೆ ಹರಪನಹಳ್ಳಿ ಮೂಲದ ಯುವತಿಯೋರ್ವಳು ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವತಿ ಐಶ್ವರ್ಯಾ ಸಿ. (20) ಎಂದು ತಿಳಿದು ಬಂದಿದೆ.

ಶೋಭಾ ಜೀವನ್‌ ಅಂಚನ್‌ ಅವರು ಜಪ್ಪು ಬಪ್ಪಾಲ್ ನಂದಿಗುಡ್ಡೆಯಲ್ಲಿರುವ ಮನೆಯಲ್ಲಿ ಎರಡೂವರೆ ವರ್ಷದಿಂದ ಹಿರಿಯರ ಆಶ್ರಮವೊಂದನ್ನು ನಡೆಸುತ್ತಿದ್ದು, ಐಶ್ವರ್ಯಾ ಅಲ್ಲಿ ಕೇರ್‌ಟೇಕರ್‌ ಆಗಿದ್ದರು ಎಂದು ತಿಳಿದು ಬಂದಿದೆ.

ಒಂದು ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಆಕೆ ಜು. 6ರಂದು ಊರಿನಲ್ಲಿ ಮನೆ ಕೆಲಸ ನಡೆಯುತ್ತಿದ್ದು, ಹಣ ಬೇಕು ಎಂದು ಶೋಭಾ ಅವರಲ್ಲಿ ಕೇಳಿದ್ದರು. ಅದರಂತೆ ಶೋಭಾ ಅವರು ಆಕೆ ನೀಡಿದ ಪ್ರಶಾಂತ್ ಚಾಮುಂಡಪ್ಪ ಎಂಬವರ ಗೂಗಲ್ ಪೇ ನಂಬರ್‌ಗೆ ಹಣ ಕಳುಹಿಸಿದ್ದರು.

ಬಳಿಕ ರಾತ್ರಿ 11 ಗಂಟೆಗೆ ನೋಡಿದಾಗ ಐಶ್ವರ್ಯಾ ಮನೆಯಲ್ಲಿ ಇರಲಿಲ್ಲ. ಎಲ್ಲ ಕಡೆ ಹಡುಕಿದರೂ ಪತ್ತೆಯಾಗದ ಕಾರಣ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Viral Video : ಓಡುತ್ತಿದ್ದ ಜಿರಳೆ ಹಿಡಿದು ಬರ್ಗರ್ ಗೆ ಹಾಕಿ ತಿಂದ ಯುವತಿ – ವಿಡಿಯೋ ವೈರಲ್

Comments are closed.