Kerala nurse: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು

Kerala nurse: ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾರನ್ನು ಜು.16 ರಂದು ಗಲ್ಲಿಗೇರಿಸಲಾಗುವುದು ತೀರ್ಪು ನೀಡಲಾಗಿದೆ. ಕಳೆದ ವರ್ಷ, ಕೇರಳದ ನಿಮಿಷಾ ಪ್ರಿಯಾ ಅವರ ಮರಣದಂಡನೆಗೆ ಯೆಮೆನ್ ಅಧ್ಯಕ್ಷರು ಅನುಮೋದನೆ ನೀಡಿದ್ದರು.

ನಿಮಿಷಾ ಪ್ರಿಯಾ ತನ್ನ ಹೆತ್ತವರನ್ನು ಪೋಷಿಸಲು 2008 ರಲ್ಲಿ ಯೆಮನ್‌ಗೆ ತೆರಳಿ ಅಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ, ಅವರು ಅಂತಿಮವಾಗಿ ಸ್ವಂತ ಕ್ಲಿನಿಕ್ ತೆರೆದರು. ನಂತರ ಯೆಮನ್‌ನಲ್ಲಿನ ನಿಯಮಗಳು, ವ್ಯವಹಾರವನ್ನು ಪ್ರಾರಂಭಿಸಲು ಸ್ಥಳೀಯರೊಂದಿಗೆ ಪಾಲುದಾರಿಕೆಯನ್ನು ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ 2014 ರಲ್ಲಿ ತಲಾಲ್ ಅಬ್ದೋ ಮಹ್ದಿ ಅವರ ಸಂಪರ್ಕಕ್ಕೆ ಬಂದರು. ಆದರೆ ಕೇರಳದ ನರ್ಸ್‌ಗೆ ಮಹ್ದಿ ಜೊತೆ ಮನಸ್ತಾಪ ಉಂಟಾಗುತ್ತದೆ. ಆತನ ವಿರುದ್ಧ ದೂರು ದಾಖಲಿಸಿದ ನಂತರ 2016 ರಲ್ಲಿ ಆತನನ್ನು ಬಂಧಿಸಲಾಯಿತು. ಆದರೆ, ನಂತರ ಜೈಲಿನಿಂದ ಬಿಡುಗಡೆಯಾದ ಆತ ಆಕೆಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ನಿಮಿಷಾ ಮಹ್ದಿಗೆ ನಿದ್ರಾಜನಕ ಚುಚ್ಚುಮದ್ದನ್ನು ನೀಡಿದ್ದಾಳೆ. ಅದು ಅತಿಯಾಗಿದ್ದರಿಂದ ಆತ ಮೃತಪಟ್ಟಿದ್ದಾನೆ. ಘಟನೆ ಬಳಿಕ ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಆಕೆಯನ್ನು ಬಂಧಿಸಲಾಗಿತ್ತು, 2018 ರಲ್ಲಿ ಕೊಲೆ ಆರೋಪ ಹೊರಿಸಲಾಯಿತು. ವಿಚಾರಣಾ ನ್ಯಾಯಾಲಯವು ಯೆಮೆನ್ ಪ್ರಜೆಯನ್ನು ಕೊಂದ ಆರೋಪದಲ್ಲಿ ಆಕೆಯನ್ನು ದೋಷಿ ಎಂದು ತೀರ್ಪು ನೀಡಿತು. ಈ ನಿರ್ಧಾರವನ್ನು ದೇಶದ ಸುಪ್ರೀಂ ನ್ಯಾಯಾಂಗ ಮಂಡಳಿಯು 2023ರ ನವೆಂಬರ್‌ನಲ್ಲಿ ಎತ್ತಿಹಿಡಿಯಿತು.
Comments are closed.