Kodagu: ಕೊಡಗು: ಕಾಡಾನೆ ದಾಳಿಗೆ ವ್ಯಕ್ತಿ ಬಲಿ!

Kodagu: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬಾಳಲೆಯಲ್ಲಿ ನಡೆದಿದೆ.

ಕೋಣನಕಟ್ಟೆ ನಿವಾಸಿ ಅಜಯ್ ಎಂಬುವವರು ಮುಂಜಾನೆ ಏಳು ಗಂಟೆ ಸುಮಾರಿಗೆ ಸೈಕಲ್ ಸವಾರಿ ಮಾಡುವ ವೇಳೆ ಕಾಡಾನೆಯೊಂದು ಎದುರಾಗಿ ಅವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ಸಂದರ್ಭದಲ್ಲಿ ಆನೆಯ ದಾಳಿಯಿಂದ ಪಾರಾದ ಅಜಯ್ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಜೀವ ಉಳಿಸಿ ಕೊಂಡಿದ್ದಾರೆ. ಆದರೆ ಅದೇ ವೇಳೆ ಆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಇನ್ನೊಬ್ಬ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ್ದು ಆತ ಉಸಿರು ಚೆಲ್ಲಿದ್ದಾರೆ.
ಇದನ್ನೂ ಓದಿ: Prakash Rai-MB Patil: ಆಂಧ್ರನ ತಮಿಳುನಾಡಿನಲ್ಲೇಕೆ ಬಹುಭಾಷಾ ನಟ ಹೋರಾಡುತ್ತಿಲ್ಲ?: ಎಂಬಿ ಪಾಟೀಲ್
Comments are closed.