Flood hit Texas: ಅಮೆರಿಕದ ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹಕ್ಕೆ ಕ್ಷಣಾರ್ಧದಲ್ಲಿ ರಸ್ತೆ ನಾಶ; ವಿಡಿಯೋ ವೈರಲ್

Share the Article

Flood hit Texas: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹವು ಕೆಲವೇ ನಿಮಿಷಗಳಲ್ಲಿ ರಸ್ತೆಯನ್ನೇ ನುಂಗಿ ಹಾಕಿದೆ. ದಾರಿಯಲ್ಲಿದ್ದ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ಕೆಲವೇ ನಿಮಿಷಗಳಲ್ಲಿ ಭೂಮಿ, ಬಿರುಸಿನಿಂದ ಪ್ರವಾಹದ ನದಿಯಾಗಿ ಪರಿವರ್ತನೆಯಾಗಿದೆ. ಲಾನೋ ನದಿ ಮತ್ತು ಕಿಂಗ್ಸ್‌ಲ್ಯಾಂಡ್ ಸ್ಪ್ಯಾಬ್ ಪ್ರವಾಹದ ಈ ದೃಶ್ಯಗಳು ವೈರಲ್ ಆಗಿವೆ. ಟೆಕ್ಸಾಸ್‌ನಲ್ಲಿ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 82ಕ್ಕೆ ತಲುಪಿದ್ದು, ಕೆರ್ ಕೌಂಟಿಯಲ್ಲಿ ಪ್ರಾಣ ಕಳೆದುಕೊಂಡವರಲ್ಲಿ 40 ವಯಸ್ಕರು, 28 ಮಕ್ಕಳಿದ್ದಾರೆ. ವರದಿಗಳ ಪ್ರಕಾರ, ಟೆಕ್ಸಾಸ್‌ನಲ್ಲಿ ಇದುವರೆಗೆ 850 ಮಂದಿಯನ್ನು ರಕ್ಷಿಸಲಾಗಿದೆ.

ಅತ್ಯಂತ ಹೆಚ್ಚು ಹಾನಿಗೊಳಗಾದ ಕೆರ್ ಕೌಂಟಿಯಲ್ಲಿ, ಸಾರ್ವಜನಿಕರೇ ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮಿಂದ ಸಾಧ್ಯವಾದಷ್ಟು ರಕ್ಷನಾ ಕಾರ್ಯವನ್ನು ತಾವೇ ಪ್ರಾರಂಭಿಸಿದ್ದಾರೆ. ವೃದ್ಧ ದಂಪತಿ ನೆರೆಮನೆಯ 92 ವರ್ಷದ ವೃದ್ಧರನ್ನು ತನ್ನ ಮನೆಯ ಅಟ್ಟದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ್ದಾರೆ.

ರಕ್ಷಣಾ ಕಾರ್ಯಕರ್ತರು ಇನ್ನೂ ಕಾಣೆಯಾಗಿರುವ ಡಜನ್ಗಟ್ಟಲೆ ಜನರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ, ಅವರಲ್ಲಿ ಶಿಬಿರದ ಶಿಬಿರಾರ್ಥಿಗಳೂ ಸೇರಿದ್ದಾರೆ. ಮಂಗಳವಾರದವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಮತ್ತಷ್ಟು ಪ್ರವಾಹದ ಭೀತಿ ಹೆಚ್ಚಾಗಿದೆ. ಪ್ರದೇಶದಾದ್ಯಂತ, ಕೆರ್ ಕೌಂಟಿಯೊಂದರಲ್ಲೇ ಕನಿಷ್ಠ 68 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ, ಹತ್ತಿರದ ಕೌಂಟಿಗಳಲ್ಲಿ ಹೆಚ್ಚುವರಿ ಸಾವುನೋವುಗಳು ವರದಿಯಾಗಿವೆ.

ಇದನ್ನೂ ಓದಿ: Aishwarya Gowda: ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಇಡಿ ನೋಟಿಸ್‌, ಡಿಕೆ ಸುರೇಶ್‌ ಹಾಜರು

Comments are closed.