Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಮೆಂಟ್‌; ದೂರು ದಾಖಲಿಸಿದ ಕಾಂಗ್ರೆಸ್‌

Share the Article

Siddaramaiah: ಸೋಮವಾರ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ನಿಯಮಿತ ವೈದ್ಯಕೀಯ ತಪಾಸಣೆಗೆ ಭೇಟಿ ನೀಡಿದ್ದು, ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಿಡಿಗೇಡಿಗಳು ಕೆಟ್ಟದಾಗಿ ಕಮೆಂಟ್‌ ಮಾಡಿದ್ದು, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪೊಲೀಸರಿಗೆ ದೂರನ್ನು ನೀಡಿದೆ.

ಸಿದ್ದರಾಮಯ್ಯ ಸಾವಿನ ಕುರಿತು ಪ್ರಸ್ತಾವನೆ ಮಾಡಿದ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಲಾಗಿದೆ. ಮುಖ್ಯಮಂತ್ರಿಗಳ ವಿರುದ್ಧ ಅಶ್ಲೀಲ ಪದಗಳ ನಿಂದನೆ ಮಾಡಲಾಗಿದೆ ಎಂದು ಪೀಣ್ಯ ಪೊಲೀಸರಿಗೆ ದೂರಿನಲ್ಲಿ ತಿಳಿಸಲಾಗಿದೆ.

ಪಶ್ಚಿಮ ಜಿಲ್ಲಾ ಕಾಂಗ್ರೆಸ್‌ ಕಮಿಟಿಯ ಕುಶಾಲ್‌ ಹರುವೇಗೌಡ ಹಾಗೂ ಸಂಜಯ್‌ ಎಂಬುವವರು ದೂರನ್ನು ನೀಡಿದ್ದಾರೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕುರಿತು ದಿನಾಂಕ 7-7-2025ರಂದು ‘‘ದಿಢೀರ್ ಆಸ್ಪತ್ರೆಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ’’ ಎಂದು ಖಾಸಗಿ ವಾಹಿನಿಯಲ್ಲಿ ಬಿತ್ತರವಾದ ಸುದ್ದಿಯ ಫೇಸ್ಬುಕ್ ಪೋಸ್ಟ್ಗೆ ಮುಖ್ಯಮಂತ್ರಿಯ ಸಾವನ್ನು ಬಯಸುವ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಇಂತಹ ವಿಕೃತ ಮನಸ್ಸಿನ ವ್ಯಕ್ತಿಗಳು ಮಾಡುವ ಅಪಪ್ರಚಾರದ ಸುಳ್ಳು ವದಂತಿ ಹಾಗೂ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಾಜ್ಯದ ಜನರಿಗೆ, ಸಿದ್ದರಾಮಯ್ಯ ನವರ ಅಭಿಮಾನಿಗಳಿಗೆ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಸ್ವರೂಪದ ನೋವು ಉಂಟಾಗಿರುತ್ತದೆ. ಇದರಿಂದ ಕಾನೂನಿನ ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಹಾಗೂ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಸ್ಕ್ರೀನ್ಶಾಟ್ಗಳ ನಕಲು ಪ್ರತಿಗಳನ್ನು ದೂರಿನೊಂದಿಗೆ ಲಗತ್ತಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Kodagu: ರಸ್ತೆ ದಾಟುತ್ತಿದ್ದ ಕಾಡಾನೆ ಮೇಲೆ ಬಿದ್ದ ವಿದ್ಯುತ್ ತಂತಿ!!

Comments are closed.