Aishwarya Gowda: ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಇಡಿ ನೋಟಿಸ್, ಡಿಕೆ ಸುರೇಶ್ ಹಾಜರು

Aishwarya Gowda: ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಆರೋಪ ಹೊತ್ತಿರುವ ಐಶ್ವರ್ಯ ಗೌಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಇ.ಡಿ ನೋಟಿಸ್ ನೀಡಿತ್ತು. ದಾಖಲಾತಿಗಳೊಂದಿಗೆ ತಮ್ಮ ಲಾಯರ್ ಜೊತೆ ಇಡಿ ಕಚೇರಿಗೆ ಬಂದ ಡಿಕೆ ಸುರೇಶ್ ಒಳಗೆ ಹೋಗಿರುವ ಕುರಿತು ವರದಿಯಾಗಿದೆ.

ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಐಶ್ವರ್ಯಾ ಗೌಡ ಅವರನ್ನು ಇಡಿ ಬಂಧನ ಮಾಡಿತ್ತು. ಐಶ್ವರ್ಯಾ ಗೌಡ ಹೇಳಿಕೆ ಹಾಗೂ ಸಾಕ್ಷಿಗಳ ಆಧರಿಸಿ ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ಸಮನ್ಸ್ ಜಾರಿ ಮಾಡಲಾಗಿದೆ ಎನ್ನಲಾಗ್ತಿದೆ.
Comments are closed.