Drugs: ಪೊಲೀಸರ ಕಾರ್ಯಾಚರಣೆ – ಮಾದಕ ವಸ್ತು ಸಾಗಾಣೆ ಮಾಡುತ್ತಿದ್ದ ಇಬ್ಬರ ವಿದೇಶಿ ಪ್ರಜೆಗಳ ಬಂಧನ

Share the Article

Drugs: ರಾಜಾನುಕುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಸಾಗಾಣೆ ಮಾಡುತ್ತಿದ್ದ ಇಬ್ಬರ ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಆರೋಪಿಗಳು ನೈಜಿರಿಯಾ ಮೂಲದವರಾಗಿದ್ದು, ಬಂಧಿತರಿಂದ 4.5 ಕೋಟಿ ಮೌಲ್ಯದ 2ಕೆಜಿ 820ಗ್ರಾಂ ಎಂಡಿಎಂಎ ಕ್ರಿಸ್ಟಲ್ ಸೀಜ್ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ರಾಜಾನುಕುಂಟೆ ಇನ್ಸ್ ಪೆಕ್ಟರ್ ದಿಲೀಪ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಮೆಡಿಕಲ್ ಗ್ರೌಂಡ್ಸ್ ಮೇಲೆ ದೆಹಲಿಗೆ ಬಂದು ನಂತರ ಅಲ್ಲಿಂದ ಬೆಂಗಳೂರಿಗೆ ಬಂದು ಮಾದಕ ವಸ್ತುಗಳ ಮಾರಾಟ ದಂಧೆ ಮಾಡುತ್ತಿದ್ದ ಆರೋಪಿಗಳು, ಹೆಸರು ಬದಲಾಯಿಸಿಕೊಂಡು ಸೆಕ್ಯೂರಿಟಿಗಳ ರೀತಿ ಬಟ್ಟೆ ಧರಿಸಿಕೊಂಡು ಓಡಾಟ ನಡೆಸುತ್ತಿದ್ದರು. ಆರೋಪಿಗಳು ರೆಡಿಮೆಡ್ ಬಟ್ಟೆಗಳ ಪ್ಯಾಕ್ ಗಳಲ್ಲಿ ತುಂಬಿ ಡ್ರಗ್ ಮಾರಾಟ ಮಾಡ್ತಿದ್ದರು ಎನ್ನಲಾಗಿದೆ. ಶರ್ಟ್, ಪ್ಯಾಂಟ್ ಗಳಲ್ಲಿ ಬಳಸುವ ಕಾರ್ಡ್ ಬೋರ್ಡ್ ಗಳಲ್ಲಿ ಮಾದಕ ವಸ್ತು ತುಂಬಿ ಮಾರುತ್ತಿದ್ದರು.

ಆರೋಪಿಗಳು ಬೇರೆಯವರ ಹೆಸ್ರಲ್ಲಿ ಮನೆ ಬಾಡಿಗೆ ಪಡೆದು ಏರ್ಪೋರ್ಟ್ ಸೆಕ್ಯುರಿಟಿ ರೀತಿ ಮನೆ ಬಳಿ ಓಡಾಡ್ತಾ ಇದ್ದರು. ಮನೆಯಲ್ಲೇ ಡ್ರಗ್ ಪ್ಯಾಕ್ ಮಾಡಿ ಸರಬರಾಜು ಮಾಡೋದನ್ನು ಮಾಡ್ತಿದ್ದ ಇವರನ್ನು ಪೊಲೀಸರು ಸದ್ಯ ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಾಜನಕುಂಟೆ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Bengaluru: ಒಂದೂವರೆ ತಿಂಗಳ ಗಂಡು ಮಗುವನ್ನು ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದ ತಾಯಿ!

Comments are closed.