Death: ಚಲಿಸುತ್ತಿದ್ದ ರೈಲಿನಲ್ಲಿ ‘ಸ್ಟಂಟ್’ ಮಾಡಲು ಹೋಗಿ ಯುವಕ ಸಾವು!

Death: ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಚಲಿಸುತ್ತಿರುವ ರೈಲಿನ ಬಾಗಿಲಿಗೆ ನೇತಾಡಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಈ ದೃಶ್ಯವನ್ನು ಆತನ ಸ್ನೇಹಿತ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕನೊಬ್ಬ ಚಲಿಸುವ ರೈಲಿನ ಬಾಗಿಲಿಗೆ ನೇತಾಡಿಕೊಂಡು ಸಾಹಸ ಮಾಡುತ್ತಿರುವುದು ಕಂಡುಬರುತ್ತದೆ. ರೈಲು ನಿಲ್ದಾಣದತ್ತ ಬರುತ್ತಿದ್ದಂತೆ, ಆ ಯುವಕ ಓಡುತ್ತಲೇ ರೈಲಿನ ಪಕ್ಕದಲ್ಲಿ ಸಾಗಲು ಯತ್ನಿಸುತ್ತಾನೆ. ಆದರೆ, ದುರದೃಷ್ಟವಶಾತ್ ಸಮತೋಲನ ಕಳೆದುಕೊಂಡು ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರಕ್ಕೆ ಜಾರಿ, ಚಲಿಸುತ್ತಿದ್ದ ರೈಲಿನ ಅಡಿಗೆ ಸಿಲುಕಿಕೊಳ್ಳುತ್ತಾನೆ.
ಘಟನೆ ನಡೆದ ನಿಖರ ಸಮಯ ಮತ್ತು ಸ್ಥಳ ತಿಳಿದುಬಂದಿಲ್ಲ. ಸದ್ಯ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ವಿಡಿಯೋದ ಸತ್ಯಾಸತ್ಯತೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ.
Comments are closed.