Facebook: ಫೇಸ್ ಬುಕ್ ನಲ್ಲಿ ವಿದೇಶಿ ಉದ್ಯೋಗದ ಜಾಹೀರಾತು: 12 ಲಕ್ಷ ಹಣ ಕಳೆದುಕೊಂಡ ಕಾರ್ಕಳದ ವ್ಯಕ್ತಿ!

Share the Article

Facebook: ಫೇಸ್ ಬುಕ್ ನಲ್ಲಿ (Facebook) ಬಂದ ವಿದೇಶಿ ಉದ್ಯೋಗದ ಜಾಹೀರಾತು ನಂಬಿ ಕಾರ್ಕಳದ ವ್ಯಕ್ತಿಯೊಬ್ಬರು ರೂ.12,43,426/- ಕಳೆದುಕೊಂಡ ಘಟನೆ ನಡೆದಿದೆ.

ಜೂನ್ 8 ರಂದು ಕಾರ್ಕಳದ ನವೀನ್ ಅವರ ಫೇಸ್ ಬುಕ್ ಅಕೌಂಟಿಗೆ ಅಲ್ ಜಬರ್ ಗ್ರೂಪ್ ಅವರ ವಿದೇಶಿ ಉದ್ಯೋಗದ ಜಾಹೀರಾತು ಬಂದಿದೆ. ಉದ್ಯೋಗ ಆಸೆಯಿಂದ ಅದರಲ್ಲಿ ಮೆಟೀರಿಯಲ್ ಕಂಟ್ರೋಲರ್ ಹುದ್ದೆಗೆ ತಮ್ಮ ವಿವರ ಸಮೇತ ಅರ್ಜಿ ಸಲ್ಲಿಸಿರುತ್ತಾರೆ. ಮರುದಿನ ಅವರಿಗೆ ವಾಟ್ಸಾಪ್ ಮುಖಾಂತರ ಇಂಟರ್ವ್ಯೂವ್ ಇರುವುದಾಗಿ ತಿಳಿಸಿರುತ್ತಾರೆ. ನಂತರ ವಂಚಕರು ಕಳುಹಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಗೂಗಲ್ ಪೇ, ಫೋನ್ ಪೇ ಮೂಲಕ ಹಂತ ಹಂತವಾಗಿ ರೂ.12,43,426 ನ್ನು ವರ್ಗಾವಣೆ ಮಾಡಿರುತ್ತಾರೆ. ನಂತರ ವೀಸಾ, ಕೆಲಸ ನೀಡದೆ ಅಪರಿಚಿತರು ವಂಚಿಸಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Puttur: ಪುತ್ತೂರು:ಮದುವೆ ನೆಪದಲ್ಲಿ ಅತ್ಯಾಚಾರ ಮಾಡಿ ಮಗು ಕರುಣಿಸಿದ ಪ್ರಕರಣ ಆರೋಪಿ ಶ್ರೀ ಕೃಷ್ಣ ಜೆ ರಾವ್ ಬಂಧನ!

Comments are closed.