Mangalore: ಮಂಗಳೂರು: ಪಿಲಿಕುಳ ಜೈವಿನ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಸಾವಿಗೆ ಕಾರಣವೇನು?

Share the Article

Mangalore: ಮಂಗಳೂರು ಹೊರವಲಯದ ಪಿಲಿಕುಳ ಜೈವಿನ ಉದ್ಯಾನವನದಲ್ಲಿ ಪುನುಗು ಬೆಕ್ಕು, ಬರಿಂಕ ಸೇರಿ ಒಂಭತ್ತು ಪ್ರಾಣಿಗಳು ಸಾವಿಗೀಡಾಗಿರುವ ಕುರಿತು ವರದಿಯಾಗಿದೆ.

ಪಿಲಿಕುಳ ಜೈವಿಕ ಉದ್ಯಾನವನದೊಳಗೆ ನೀರು ನುಗ್ಗಿ, ಕಂಪೌಂಡ್‌ ಕುಸಿದು ಪ್ರಾಣಿಗಳಿಗೆ ತೊಂದರೆಯಾಗಿತ್ತು. ಈ ಕುರಿತು ವನ್ಯಜೀವಿ ಸಂರಕ್ಷಕ ಭುವನ್‌ ದೇವಾಡಿಗ ಅವರು ಸೆಂಟ್ರಲ್‌ ಝೂ ಅಥಾರಿಟಿಗೆ ದೂರನ್ನು ನೀಡಿದ್ದರು. ವನ್ಯಜೀವಿ ವಾರ್ಡನ್‌ಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ವಾರದೊಳಗೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಂಭತ್ತು ಪ್ರಾಣಿಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಪಿಲಿಕುಳದಲ್ಲಿ 2 ಕೃಷ್ಣಮೃಗ, 5 ಪುನುಗು ಬೆಕ್ಕು, 1 ಬಿಳಿ ಗೂಬೆ, 1 ಬರಿಂಕ ಸೇರಿ 9 ಪ್ರಾಣಿಗಳು ಮೃತಪಟ್ಟಿದೆ ಎನ್ನಲಾಗಿದೆ. ಪಿಲಿಕುಳದಲ್ಲಿ 2 ಪುನುಗು ಬೆಕ್ಕುಗಳು, ಒಂದು ಬರಿಂಕ ಮಾತ್ರ ಮೃತಪಟ್ಟಿದೆ. ಮಳೆಯ ಕಾರಣದಿಂದ ಶೀತ ವಾತಾವರಣ ಹೆಚ್ಚಾದ ಕಾರಣ ಪ್ರಾಣಿಗಳು ಮೃತಪಟ್ಟಿದೆ ಎಂದು ಜೈವಿಕ ಉದ್ಯಾನವನದ ಪ್ರಭಾರ ನಿರ್ದೇಶಕರು ತಿಳಿಸಿರುವ ಕುರಿತು ಏಷ್ಯಾನೆಟ್‌ ಸುವರ್ಣ ವರದಿ ಮಾಡಿದೆ.

ಇದನ್ನೂ ಓದಿ: Space: ಬಾಹ್ಯಾಕಾಶದಲ್ಲಿ ಮಾನವ ದೇಹದ ಮೇಲೆ ಉಂಟಾಗುವ ಪ್ರಮುಖ ಪರಿಣಾಮಗಳೇನು? ಈ ಬಗ್ಗೆ ನಾಸಾ ಏನ್ ಹೇಳ್ತದೆ?

Comments are closed.