Mangaluru: ಉಳ್ಳಾಲ: ನಾಪತ್ತೆ ಆಗಿದ್ದ ಯುವಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

Share the Article

Mangaluru: ಜು.2 ರಂದು ರಾತ್ರಿ ನಾಪತ್ತೆಯಾದ ಬೀರಿ ನಿವಾಸಿ ಯುವಕನ ಮೃತದೇಹ ಉಚ್ಚಿಲ ರೈಲ್ವೆ ಗೇಟ್ ಸಮೀಪ ಪತ್ತೆಯಾಗಿರುವ ಬಗ್ಗೆ ವರದಿ ಆಗಿದೆ.

ಕೋಟೆಕಾರು ಬೀರಿ ನಿವಾಸಿ, ಮೋಹನ್ ದಾಸ್ ಎಂಬವರ ಪುತ್ರ

ತೇಜಸ್(25) ಮೃತ ಯುವಕ ಜು. 02 ರಂದು ರಾತ್ರಿ ಮಲಗುವ ಕೋಣೆಯಿಂದ ತೇಜಸ್ ನಾಪತ್ತೆಯಾಗಿದ್ದ. ಈ ಕುರಿತು ಆತನ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು(ಜು.04) ಬೆಳಿಗ್ಗೆ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.

ತೇಜಸ್ ಮಣಿಪಾಲ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದ್ದು ಘಟನೆಗೆ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mangalore: ಮಂಗಳೂರು: ಪಿಲಿಕುಳ ಜೈವಿನ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಸಾವಿಗೆ ಕಾರಣವೇನು?

Comments are closed.