Delhi: ಹಿಂದೂ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ಗರ್ಭಿಣಿ ಮಾಡಿದ ಮುಸ್ಲಿಮ್ ವ್ಯಕ್ತಿ – ವಿಷಯ ಗೊತ್ತಾಗುತ್ತಿದ್ದಂತೆ ಆಸಿಡ್ ಕುಡಿದ ಯುವತಿ

Delhi : ಮುಸ್ಲಿಂ ವ್ಯಕ್ತಿ ಒಬ್ಬ ತಾನು ಹಿಂದೂ ಎಂದು ಹೇಳಿಕೊಂಡು ಹಿಂದೂ ಯುವತಿ ಒಬ್ಬಳಿಗೆ ಮದುವೆಯಾಗುವ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಿತ್ರ ಘಟನೆ ಒಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, ವಸಂತ ಕುಂಜ್ ಪ್ರದೇಶದಲ್ಲಿ ಮಹಮ್ಮದ್ ರೆಹಾನ್ ಎಂಬಾತ ಮದುವೆಯ ಭರವಸೆ ನೀಡಿ ಹಿಂದೂ ಯುವತಿ ಮೇಲೆ ಬಲಾತ್ಕಾರ ಮಾಡಿದ್ದಾನೆ. ಸಂತ್ರಸ್ತ ಯುವತಿ ಎರಡು ಬಾರಿ ಗರ್ಭಿಣಿಯಾಗಿದ್ದು, ರೆಹಾನ್ ವಂಚಿಸಿ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದಾನೆ. ಆತನ ನಿಜ ಬಣ್ಣ ಬಯಲಾಗುತ್ತಿದ್ದಂತೆ ಸಂತ್ರಸ್ತ ಯುವತಿ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸಧ್ಯ ಯುವತಿಗೆ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿ ರೆಹಾನ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಂದಹಾಗೆ ಮಹಮ್ಮದ್ ರೆಹಾನ್ ತನ್ನ ಧರ್ಮವನ್ನು ಮರೆಮಾಚಿ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದನು. ನಂತರ ಮದುವೆಯ ಭರವಸೆ ನೀಡಿ ಹಲವು ವರ್ಷಗಳಿಂದ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಬಲಾತ್ಕಾರ ಮಾಡುವಾಗ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಫೋಟೋಗಳನ್ನೂ ಸಹ ತೆಗೆದಿದ್ದನು. ಅವುಗಳನ್ನು ಪ್ರಸಾರ ಮಾಡುವುದಾಗಿ ಆಕೆಗೆ ಬೆದರಿಕೆ ಹಾಕುತ್ತಿದ್ದನು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Diabetes: ಮಧುಮೇಹಕ್ಕೆ ಕೇವಲ ಸಿಹಿ ತಿಂಡಿಗಳೇ ಕಾರಣವಲ್ಲ! ಹಾಗಾದರೆ ಶುಗರ್‌ಗೆ ನಿಜವಾದ ಕಾರಣವೇನು?
Comments are closed.