Food City: ವಿಶ್ವದ 100 ಅತ್ಯುತ್ತಮ ಆಹಾರ ನಗರಗಳ ಪಟ್ಟಿ ಬಿಡುಗಡೆ: ಭಾರತದ 6 ನಗರಗಳು ಪಟ್ಟಿಯಲ್ಲಿವೆ?

Share the Article

Food City: ಮನುಷ್ಯ ಬದುಕಬೇಕಾದರೆ ಆಹಾಋ ಮುಖ್ಯ. ಅದರಲ್ಲೂ ಪೌಷ್ಟಿಕ, ಸ್ವಚ್ಛವಾದ, ಅಚ್ಚುಕಟ್ಟಾಗಿ ಮಾಡುವ ಆಹಾರ ಮುಖ್ಯ. ಇಂತಹ ಆಹಾರಗಳನ್ನು ಒದಗಿಸುವ ಸಿಟಿಗಳ ಪಟ್ಟಿ ಇದೀಗ ಬಿಡುಗಡೆಗೊಂಡಿದೆ.

ಅಧಿಕೃತ ಪಾಕವಿಧಾನಗಳು, ಆಹಾರ ವಿಮರ್ಶಕರ ವಿಮರ್ಶೆಗಳು ಮತ್ತು ಜನಪ್ರಿಯ ಪದಾರ್ಥಗಳು ಮತ್ತು ಭಕ್ಷ್ಯಗಳ ಕುರಿತು ಸಂಶೋಧನಾ ಲೇಖನಗಳನ್ನು ಒಟ್ಟುಗೂಡಿಸಿ ಆನ್‌ಲೈನ್‌ ಆಹಾರ ಮಾರ್ಗದರ್ಶಿ ಟೇಸ್ಟ್ಅಟ್ಲಾಸ್ ವಿಶ್ವದ 100 ಅತ್ಯುತ್ತಮ ಆಹಾರ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ನಾಲ್ಕು ಸ್ಥಾನಗಳನ್ನು ಇಟಾಲಿಯನ್ ನಗರಗಳು ಪಡೆದುಕೊಂಡಿವೆ. ನೇಪಲ್ಸ್ ನಗರ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮಿಲನ್‌, ಬೊಲೊಗ್ನಾ ಮತ್ತು ಫ್ಲಾರೆನ್ಸ್ ನಂತರದ ಸ್ಥಾನದಲ್ಲಿವೆ.

ಈ ಪಟ್ಟಿಯಲ್ಲಿ 6 ಭಾರತೀಯ ನಗರಗಳು ಸೇರಿವೆ. ಮುಂಬೈ (5ನೇ ಸ್ಥಾನ), ಅಮೃತಸರ (43ನೇ ಸ್ಥಾನ), ನವದೆಹಲಿ (45ನೇ ಸ್ಥಾನ), ಹೈದರಾಬಾದ್ (50ನೇ ಸ್ಥಾನ), ಕೋಲ್ಕತ್ತಾ (71ನೇ ಸ್ಥಾನ) ಮತ್ತು ಚೆನ್ನೈ 75ನೇ ಸ್ಥಾನದಲ್ಲಿದೆ.

ಹಾಗಾದರೆ ಈ ನಗರಗಳನ್ನು ನಿರ್ಣಯಿಸಲು ಮಾನದಂಡಗಳೇನು? ಟೇಸ್ಟ್‌ಅಟ್ಲಾಸ್‌ನ ವೆಬ್‌ಸೈಟ್ ಪ್ರಕಾರ, “ನಮ್ಮ ಡೇಟಾಬೇಸ್‌ನಲ್ಲಿರುವ 17,073 ನಗರಗಳಲ್ಲಿ, 15,478 ಆಹಾರಗಳಿಗೆ 477,287 ಮಾನ್ಯ ಆಹಾರ ರೇಟಿಂಗ್‌ಗಳ ಆಧಾರದ ಮೇಲೆ, ಈ 100 ನಗರಗಳು ಅಲ್ಲಿ ಸಾಮಾನ್ಯವಾಗಿ ಬಡಿಸುವ ಪ್ರಾದೇಶಿಕ ಮತ್ತು ರಾಷ್ಟ್ರೀಯ ಭಕ್ಷ್ಯಗಳಿಗೆ ಅತ್ಯಧಿಕ ಸರಾಸರಿ ರೇಟಿಂಗ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ನೇಪಲ್ಸ್ ನಗರವು 4.8 ರೇಟಿಂಗ್ ಪಡೆದುಕೊಂಡಿದೆ. ಅತಿ ಹೆಚ್ಚು ರೇಟಿಂಗ್ ಪಡೆದ ಆಹಾರ ಪದಾರ್ಥವೆಂದರೆ, ಅದು 4.9 ರೇಟಿಂಗ್ ಹೊಂದಿರುವ ಪಿಜ್ಜಾ. ಇಂದು ನಮಗೆ ತಿಳಿದಿರುವ ಪಿಜ್ಜಾವನ್ನು ಟೊಮೆಟೊ ಸಾಸ್, ಚೀಸ್ ಮತ್ತು ಹಲವಾರು ಮೇಲೋಗರಗಳಿಂದ ತಯಾರಿಸಲಾಗುತ್ತದೆ.

ಭಾರತೀಯರು ಸೇರಿದಂತೆ ಎಲ್ಲರೂ ಇಷ್ಟ ಪಡುವ ಪಿಜ್ಜಾ ಹುಟ್ಟಿಕೊಂಡಿದ್ದು, ಇಟಲಿಯಲ್ಲಿ. “ಇದು 18 ನೇ ಶತಮಾನದಲ್ಲಿ ನೇಪಲ್ಸ್‌ನಲ್ಲಿ ಅಗ್ಗದ, ಪೌಷ್ಟಿಕ ಆಹಾರವಾಗಿ ಜನಪ್ರಿಯವಾಯಿತು, ಇದನ್ನು ಮುಖ್ಯವಾಗಿ ರೈತರು ಸೇವಿಸುತ್ತಿದ್ದರು. ಇಂದು ನಮಗೆ ತಿಳಿದಿರುವಂತೆ ಆಧುನಿಕ ಪಿಜ್ಜಾವು ಕೊಬ್ಬು, ಉಪ್ಪು ಮತ್ತು ಬೆಳ್ಳುಳ್ಳಿಯೊಂದಿಗೆ ಅಲಂಕರಿಸಲ್ಪಟ್ಟ ಆರಂಭಿಕ ನಿಯಾಪೊಲಿಟನ್ ಫ್ಲಾಟ್‌ಬ್ರೆಡ್‌ಗಳಿಂದ ವಿಕಸನಗೊಂಡಿತು” ಎಂದು ಟೇಸ್ಟ್‌ಅಟ್ಲಾಸ್ ವೆಬ್‌ಸೈಟ್ ಹೇಳುತ್ತದೆ.

ಇದನ್ನೂ ಓದಿ: Actress Bhavana: ಮದುವೆಯಾಗದೇ ಅವಳ ಮಕ್ಕಳನ್ನು ಹೆರಲು ರೆಡಿಯಾಗಿರುವ ನಟಿ ಭಾವನಾ

Comments are closed.