Weather Report: ಕರ್ನಾಟಕದ ಹವಾಮಾನ ವರದಿ ಹೇಗಿದೆ? ಕೇರಳದಲ್ಲಿ ಮುಂಗಾರು ದುರ್ಬಲ : ಔಷಧಿ ಸಿಂಪಡಿಸಲು ಸಣ್ಣ ಸಣ್ಣ ಅವಕಾಶ

Weather Report: ದಕ್ಷಿಣ ದ್ರವದ ಕಡೆಯಿಂದ ಬೀಸುತ್ತಿರುವ ಪ್ರಬಲ ಗಾಳಿಯ ಪ್ರಭಾವದಿಂದ (ಸೊಮಾಲಿಯಾನ್ ಜಟ್ ವೇವ್ಸ್ ರೀತಿಯ) ಕಳೆದ ಮೂರು ದಿನಗಳಿಂದ ಮುಂಗಾರು ಜೊತೆಗೂಡಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮ ಹಾಗೂ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಆದರೆ ಕೇರಳದಲ್ಲಿ ಈಗಾಗಲೇ ಮುಂಗಾರು ದುರ್ಬಲಗೊಳ್ಳುತ್ತಿದೆ.
ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ಮುಂದಿನ 10 ದಿನಗಳವರೆಗೂ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ. ತೋಟಗಳಿಗೆ ಔಷಧಿ ಸಿಂಪಡಿಸಲು ಸಣ್ಣ ಸಣ್ಣ ಅವಕಾಶಗಳು ಮಾತ್ರ ಸಿಗಬಹುದು.
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. ಈಗಿನಂತೆ ಜುಲೈ 6ರಿಂದ ಔಷಧಿ ಸಿಂಪಡಿಸಲು ಸಣ್ಣ ಅವಕಾಶಗಳು ಸಿಗಬಹುದು.
ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ.
ಇದನ್ನೂ ಓದಿ: Heart Attack: ಹಾಸನದಲ್ಲಿ ನಿಲ್ಲದ ಹೃದಯಾಘಾತ: ಮತ್ತೋರ್ವ ಮಹಿಳೆ ಸಾವು
Comments are closed.