Actor Darshan: ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿ ಪತ್ನಿ ಜೊತೆ ನಟ ದರ್ಶನ್: ಅಭಿಮಾನಿಗಳಿಂದ ನೂಕುನುಗ್ಗಲು

Actor Darshan: ನಟ ದರ್ಶನ್ ಆಷಾಡಮಾಸದ ಶುಕ್ರವಾರ (ಇಂದು) ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಜೈಲಿನಲ್ಲಿದ್ದ ಕಾರಣ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ.
ಇಂದು ಜುಲೈ 04 ಶುಕ್ರವಾರ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ಜೊತೆ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿದ್ದಾರೆ.
ಚಾಮುಂಡೇಶ್ವರಿ ತಾಯಿಗೆ ಇಂದು ಲಕ್ಷ್ಮೀ ಅಲಂಕಾರ, ಹೂವು, ಬಳೆ, ತೋತಾಪುರಿ ಮಾವಿನ ಕಾಯಿಯಿಂದ ಅಲಂಕಾರ ಮಾಡಲಾಗಿತ್ತು.
ದರ್ಶನ್ ಆಗಮಿಸಿದ ಸಂದರ್ಭ ಸಾಕಷ್ಟು ಮಂದಿ ಅಭಿಮಾನಿಗಳು ಅವರನ್ನು ನೋಡಲು ಬಂದ ಕಾರಣ ದೇವಸ್ಥಾನದಲ್ಲಿ ನೂಕು-ನುಗ್ಗಲು ಉಂಟಾದ ಘಟನೆ ನಡೆದಿದೆ.
Comments are closed.