Puttur: ಪುತ್ತೂರು: ದೈಹಿಕ ಸಂಪರ್ಕ ಬೆಳೆಸಿ ವಂಚನೆ: ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಕಾನೂನಿನ ನೆರವನ್ನು ಕಲ್ಪಿಸುತ್ತೇನೆ ಎಂಬುದಾಗಿ ಭರವಸೆ: ಪ್ರತಿಭಾ ಕುಳಾಯಿ

Puttur: ದೈಹಿಕ ಸಂಪರ್ಕ ಬೆಳೆಸಿ ಬಳಿಕ

ವಂಚಿಸಿದ ಪ್ರಕರಣ ಸಂಬಂಧಿಸಿದ ಸಂತ್ರಸ್ತೆ ಮನೆಗೆ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಗುರುವಾರ ಸಂಜೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, ಈ ವಿಚಾರದಲ್ಲಿ ಕಾನೂನು ಸಂಘರ್ಷವೇ ಪರಿಹಾರವಲ್ಲ. ಮಾತುಕತೆ ಮೂಲಕ ಯುವತಿ-ಯುವಕನನ್ನು ಒಂದು ಮಾಡಿ ಮದುವೆ ಮಾಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ತಾಯಿ ಮಗುವಿನ ಹಣಕಾಸು ಖರ್ಚನ್ನು ನಾನು ಸಂಪೂರ್ಣ ಭರಿಸಲಿದ್ದೇನೆ. ಅಗತ್ಯವಿದ್ದರೆ ಕಾನೂನಿನ ಎಲ್ಲಾ ನೆರವನ್ನು ಕಲ್ಪಿಸುತ್ತೇನೆ. ಇದಕ್ಕಿಂತಲೂ ಹೆಚ್ಚಾಗಿ ಅವರಿಬ್ಬರ ಮದುವೆ ಮಾಡುವ ನಿಟ್ಟಿನಲ್ಲಿ ಯುವಕನ ಹೆತ್ತವರ ಜತೆಗೂ ಮಾತನಾಡಿ ಅವರ ಮನವೊಲಿಸುವ ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ: Crime: ತಾಯಿ-ಮಗನ ಗಂಟಲು ಸೀಳಿ ಬರ್ಬರ ಹತ್ಯೆ! ಮನೆ ಕೆಲಸದವನಿಂದ ಕೃತ್ಯ!
Comments are closed.