Sushma: ಕಿಚ್ಚನ ನಿರ್ಧಾರ ಬದಲಾಗುವಂತೆ ಮಾಡಿದ್ದೆ ಈ ಸುಷ್ಮಾ – ರಿಯಲ್ ಬಿಗ್ ಬಾಸ್ ಇವರೇ ಅಂತೆ ಗುರೂ !!

Sushma: ಕಿರುತರಯ್ಯ ಬಹುಜನಪ್ರಿಯ ಶೋ ಆಗಿರುವ ಬಿಗ್ ಬಾಸ್ ನಿರೂಪಣೆಯಿಂದ ಕಿಚ್ಚ ಸುದೀಪ್ ನಿವೃತ್ತಿ ಪಡೆಯುತ್ತಿರುವುದಾಗಿ ಕಳೆದ ಬಾರಿ ಘೋಷಿಸಿದ್ದರು. ಇದೀಗ ಬಿಗ್ ಬಾಸ್ 12ನೇ ಆವೃತ್ತಿ ಶುರುವಾಗುತ್ತಿದ್ದು ಅಚ್ಚರಿ ಎಂಬಂತೆ ಮತ್ತೆ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಹೋಸ್ಟ್ ಮಾಡಲು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸುಮಾರು 15 ಎಪಿಸೋಡ್ಗಳವರೆಗೂ ಕೂಡ ಅವರು ಅಗ್ರೀಮೆಂಟ್ ಅನ್ನು ಕೂಡ ಮಾಡಿಕೊಂಡಿದ್ದಾರೆ. ಕಿಚ್ಚನ ಈ ಒಂದು ಕಠಿಣ ನಿರ್ಧಾರ ಬದಲಾಗಲು ಕಾರಣ ಒಬ್ಬರು ಲೇಡಿ ಅನ್ನೋದು ನಿಮಗೆ ಗೊತ್ತಾ?

ಅಂದ ಹಾಗೆ ಇತ್ತೀಚೆಗೆ ಬಿಗ್ ಬಾಸ್ ತಂಡ ಸುದ್ದಿಗೋಷ್ಠಿ ನಡೆಸಿ ಬಿಗ್ ಬಾಸ್ ಸೀಸನ್ 12 ಬಗ್ಗೆ ಬಿಗ್ ಅಪ್ಡೇಟ್ ನೀಡಿತು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರೇ ನಿರೂಪಣೆಯನ್ನು ಮಾಡುತ್ತಾರೆ, ಬಿಗ್ ಬಾಸ್ ಪೋಸ್ಟ್ ಮಾಡುತ್ತಾರೆ ಎಂದು ತಂಡವು ಘೋಷಿಸಿತು. ಅಲ್ಲದೆ, ಸುದೀಪ್ ಸಹ ಸುಷ್ಮಾ ಅವರಿಗಾಗಿ ನಾನು ಅಂಕರಿಂಗ್ ಮಾಡಲು ಒಪ್ಪಿಕೊಂಡೆ ಅಂತ ಹೇಳಿದರು.. ಇದೀಗ ಎಲ್ಲರೂ.. ಈ ಸುಷ್ಮಾ ಯಾರು ಅಂತ ತಲೆಕೆಡಿಸಿಕೊಂಡಿದ್ದಾರೆ… ಅವರ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ಸುಷ್ಮಾ ರಾಜೇಶ್ ಜಿಯೋ ಸ್ಟಾರ್ ಇಂಡಿಯಾದ ಕನ್ನಡ ವ್ಯವಹಾರಗಳ ಮುಖ್ಯಸ್ಥೆ, ಈ ಹಿಂದೆ ಡಿಸ್ನಿ ಸ್ಟಾರ್‌ನಲ್ಲಿ 2 ದಶಕಗಳ ಕಾಲ ವಿವಿಧ ಹುದ್ದೆಗಳನ್ನ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ, ಲೈಫ್ ಓಕೆ ವಾಹಿನಿಯ ಮಾರ್ಕೆಟಿಂಗ್ ಮತ್ತು ಚಾನೆಲ್ ಸ್ಟ್ರಾಟೆಜಿ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. ಸ್ಟಾರ್ ಉತ್ಸವ್ ವಾಹಿನಿಯ ಬಿಸಿನೆಸ್ ಹೆಡ್ ಆಗಿ ಮತ್ತು ತೆಲುಗಿನ ಮಾ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 2023ರಲ್ಲಿ ಕನ್ನಡ ಮತ್ತು ಮರಾಠಿ ಕ್ಲಸ್ಟರ್ ಮುಖ್ಯಸ್ಥರಾಗಿ ವಯಕಾಮ್ 18 ಸಂಸ್ಥೆ ಸೇರಿದರು. ಸದ್ಯ ಜಿಯೋ ಸ್ಟಾರ್ ಇಂಡಿಯಾದ ಕನ್ನಡ ವ್ಯವಹಾರಗಳ ಮುಖ್ಯಸ್ಥರಾಗಿ ಸುಷ್ಮಾ ರಾಜೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ..
Comments are closed.