Police resign: ಯಾರದೋ ತಪ್ಪಿಗೆ ನನ್ನ ದಂಡಿಸಿದರಲ್ಲಾ : ಎಎಸ್ಪಿ ನಾರಾಯಣ ಭರಮನಿ ರಾಜೀನಾಮೆ ನಿರ್ಧಾರ – ಸಿಎಂ, ಗೃಹಸಚಿವರ ಮನವೊಲಿಕೆಗೆ ಜಗ್ಗದ ಭರಮನಿ

Share the Article

Police resign: ಸಿದ್ದರಾಮಯ್ಯ ಕೋಪಕ್ಕೆ ತುತ್ತಾಗಿದ್ದ ಬೆಳಗಾವಿ ಎಎಸ್ಪಿ ನಾರಾಯಣ ಭರಮನಿ ರಾಜೀನಾಮೆ ‌ನೀಡಲು ನಿರ್ಧರಿಸಿದ್ದಾರೆ. ಇದೀಗ ಅವರ ರಾಜೀನಾಮೆ ಪತ್ರ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಯಾರದೋ ತಪ್ಪಿಗೆ ನನ್ನ ದಂಡಿಸಿದ್ದಾರಲಾ ಎಂದು ನೊಂದು ಭರಮನಿ ರಾಜೀನಾಮೆ ಪತ್ರ ಬರೆದಿದ್ದಾರೆ.

ಭರಮನಿ12ನೇ ತಾರೀಖಿನಂದು ರಾಜೀನಾಮೆ ಪತ್ರವನ್ನು ಡಿಜಿಗೆ ಮೇಲ್ ಮಾಡಿದ್ದರು. ಅದಾದ ಬಳಿಕ ಅಧಿಕಾರಿಗಳು ಗೃಹ ಸಚಿವರಿಗೆ ಈ ಮಾಹಿತಿಯನ್ನು ರವಾನಿಸಿದ್ದಾರೆ. ತದನಂತರ ಗೃಹ ಸಚಿವ ಪರಮೇಶ್ವರ ಸಂಧಾನ ಸಭೆ ಮಾಡಿದರೂ, ಭರಮನಿ ರಾಜೀನಾಮೆ ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ಬಳಿಕ ಸಿದ್ದರಾಮಯ್ಯ ಕೂಡ ಭರಮನಿ ಕರೆಸಿ ಸಮಾಧಾನ ಮಾಡಿ ಸಭೆ ನಡೆಸಿದ್ದಾರೆ. ಆ ವೇಳೆ ಅವರಿಗೆ ಉತ್ತರಿಸಿದ ಭರಮನಿ, ನೀವು ಚೇಂಬರ್ ಗೆ ಕರೆದು ಹೇಳಿದ್ದರೆ ನಾನು ಬೇಸರವಾಗುತ್ತಿರಲಿಲ್ಲ. ಸಾರ್ವಜನಿಕವಾಗಿ ನೀವು ನಡೆದುಕೊಂಡ ರೀತಿ ನನಗೆ ಅವಮಾನ ಆಗಿದೆ ಎಂದು ಸಿದ್ದರಾಮಯ್ಯಗೆ ಭರಮನಿ ಬೇಸರ ತೋಡಿಕೊಂಡಿದ್ದಾರೆ.

ಪರಮೇಶ್ವರ ಮತ್ತೆ ಸಮಾಧಾನ ಮಾಡುವ ಪ್ರಯತ್ನ ಮಾಡಿ, ನೀವು ಈಗ ರಾಜೀನಾಮೆ ನೀಡಿದರೆ ಮುಖ್ಯಮಂತ್ರಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಮುಖ್ಯಮಂತ್ರಿ ಎಂದ ಮೇಲೆ ತುಂಬಾ ಒತ್ತಡ ಇರುತ್ತದೆ. ನೀವು ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ ಎಂದು ಸಂಧಾನ ಸಭೆ ನಡೆಸಿದ್ದಾರೆ. ಆದರೆ ಸ್ವತಃ ಸಿಎ, ಗೃಹ ಸಚಿವರೇ ಸಂಧಾನ ಮಾಡಿದರು ಒಪ್ಪದ ನಾರಾಯಣ ಭರಮನಿ ರಾಜೀನಾಮೆ ಸಲ್ಲಿಸಿದ್ದಾರೆ.

ಆದರೆ ಇನ್ನು ಕೂಡ ರಾಜೀನಾಮೆ ಅಂಗೀಕಾರ ಆಗಲಿಲ್ಲ. ಆದರೆ ಸಿಎಂ ಮನವೊಲಿಕೆಗೂ ಒಪ್ಪದೇ ರಾಜೀನಾಮೆ ನಿರ್ಧಾರ ಅಚಲ ಎಂದಿದ್ದಾರೆ ಭರಮನಿ. ಈಗಾಗಲೇ ರಾಜೀನಾಮೆ ಪತ್ರ ಕಳುಹಿಸಿರುವ ನಾರಾಯಣ ಬರಮನಿ ಅವರ ನಿರ್ಧಾರಕ್ಕೆ ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ ಸಾಧ್ಯತೆ ಇದೆ.

ಇದನ್ನೂ ಓದಿ: BJP: ದೆಹಲಿಯಲ್ಲಿ ಬಿಜೆಪಿ ರೆಬಲ್ ಟೀಂ – 100ಕ್ಕೆ 100 ವಿಜಯೇಂದ್ರ ಬದಲಾವಣೆ ನಿರೀಕ್ಷೆ – ಕುಮಾರ್ ಬಂಗಾರಪ್ಪ

Comments are closed.