Pune: ಯುವತಿ ಮೇಲೆ ಅತ್ಯಾಚಾರ, ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು, ಮತ್ತೆ ಬರ್ತೀನಿ ನೋಟ್‌ ಬರೆದು ಹೋದ ಡೆಲಿವರಿ ಬಾಯ್‌

Share the Article

Pune: ಡೆಲವರಿಗೆಂದು ಬಂದಿದ್ದ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. ಐಷರಾಮಿ ಫ್ಲಾಟ್‌ನಲ್ಲಿದ್ದ ಯುವತಿ ಮನೆಗೆ ಕೊರಿಯರ್‌ ನೀಡಲೆಂದು ಬಂದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮೊಬೈಲ್‌ನಲ್ಲಿ ಒಟಿಪಿ ನೋಡಲು ಒಳಗೆ ಹೋದ ವ್ಯಕ್ತಿ ಬಾಗಿಲು ಲಾಕ್‌ ಮಾಡಿ ಮನೆಯೊಳಗೆ ಪ್ರವೇಶಿಸಿ ಅತ್ಯಾಚಾರ ಮಾಡಿದ್ದಾನೆ.

ಆರೋಪಿ ಯುವತಿ ಮುಖಕ್ಕೆ ಸ್ಪ್ರೇ ಮಾಡಿದ್ದು, ಆಕೆ ಪ್ರಜ್ಞಾಹೀನಳಾಗಿ ಬಿದ್ದಾಗ ಕೂಡಲೇ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾಣೆ. ಹೊರಡುವ ಮೊದಲು ಆಕೆಯ ಮೊಬೈಲ್‌ನಿಂದ ಸೆಲ್ಫಿ ತೆಗೆದು ನಾನು ಮತ್ತೆ ಬರ್ತೀನಿ ಎಂದು ಬೋಟ್‌ ಬರೆದಿಟ್ಟು ಹೋಗಿದ್ದಾನೆ.

ಸಂಜೆ ಸರಿಸುಮಾರು 7.30 ರ ಸುಮಾರಿಗೆ ಫ್ಲಾಟ್‌ಗೆ ಡೆಲಿವರಿ ಬಾಯ್‌ ಹೋಗಿದ್ದಾನೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಅಪರಾಧ ವಿಭಾಗದ ಐದು ಮತ್ತು ಐದು ವಲಯ ತಂಂಡಗಳು ಸೇರಿ ಡೆಲಿವರಿ ಬಾಯ್‌ ಪತ್ತೆ ಹಚ್ಚುವ ಪ್ರಕರಣದಲ್ಲಿ ತೊಡಗಿಕೊಂಡಿದೆ.

ಇದನ್ನೂ ಓದಿ: Mangaluru: ಮಂಗಳೂರು ಸಾಲು ಸಾಲು ಹಬ್ಬಗಳ ಹಿನ್ನೆಲೆ: ವಿವಿಧ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆಗಳ ಆಚರಣೆ, ಪೊಲೀಸ್‌ ಇಲಾಖೆಯಿಂದ ಷರತ್ತು, ಮಾರ್ಗಸೂಚಿ ಇಲ್ಲಿದೆ

Comments are closed.