BJP: ದೆಹಲಿಯಲ್ಲಿ ಬಿಜೆಪಿ ರೆಬಲ್ ಟೀಂ – 100ಕ್ಕೆ 100 ವಿಜಯೇಂದ್ರ ಬದಲಾವಣೆ ನಿರೀಕ್ಷೆ – ಕುಮಾರ್ ಬಂಗಾರಪ್ಪ

Share the Article

BJP:  ಕೇವಲ ರಾಜ್ಯ ಕಾಂಗ್ರೆಸ್ನಲ್ಲಿ ಮಾತ್ರವಲ್ಲ ಅತ್ತ ರಾಜ್ಯ ಬಿಜೆಪಿಯಲ್ಲೂ ಏನೂ ಸರಿ ಇಲ್ಲ ಅನ್ನೋದು ಜನಕ್ಕೆ ತಿಳಿದೇ ಇದೆ. ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ತಿಕ್ಕಾಟ ನಡೆಯುತ್ತಿದ್ರೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಒಂದು ಬಣ ಪಟ್ಟು ಹಿಡಿದಿದೆ. ಇದೀಗ ರಾಜ್ಯದ ಬಿಜೆಪಿ ರೆಬಲ್ ಟೀಂ ದೆಹಲಿ ತಲುಪಿದೆ. ಅದರಲ್ಲಿ ಮೊದಲನೆಯವರಾಗಿ ಮಾಜಿ ಸಚಿವ ಕುಮಾರ ಬಂಗಾರಪ್ಪ ದೆಹಲಿ ತಲುಪಿದ್ದಾರೆ.

ಅಧ್ಯಕ್ಷ ಹೆಸರು ಘೋಷಣೆ ಮುನ್ನ ದೆಹಲಿಗೆ ಬಂದಿರುವ ರೆಬಲ್ ಟೀಂ, ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಕುಮಾರ ಬಂಗಾರಪ್ಪ, ವಿಜಯೇಂದ್ರ ಬದಲಾವಣೆ ನಿರೀಕ್ಷೆ ಇದ್ದೇ ಇದೆ, 100ಕ್ಕೆ 100 ನಿರೀಕ್ಷೆ ಮಾಡುತ್ತಿದ್ದೇವೆ. ಹೈಕಮಾಂಡ್ ನಾಯಕರಿಗೆ ಏನು ಹೇಳಬೇಕೋ ಹಲವು ಬಾರಿ ಹೇಳಿದ್ದೇವೆ. ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಈಗ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಂಡರೂ ನಾವು ಬದ್ಧ ಎಂದು ಹೇಳಿದರು.

ಇದುವರೆಗೂ ಕೆಲವು ರಾಜ್ಯದ ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದಾರೆ. ಅಂದರೆ ಅದು ಕೆಲ ಉದ್ದೇಶ ಇರುತ್ತದೆ. ಇನ್ನೂ ಕೆಲವು ಯಾಕೆ ಮಾಡಿಲ್ಲ ಅಂತಾ ಇದ್ರೆ ಉತ್ತರ ಬರುವರೆಗೂ ಕಾಯುತ್ತೇವೆ‌. ಇನ್ನೂ ನಾಲ್ಕು ರಾಜ್ಯಗಳ ಘೋಷಣೆ ಬಾಕಿ ಇದೆ‌. ಕರ್ನಾಟಕ ಬಿಜೆಪಿಯ ಹೆಬ್ಬಾಗಿಲು. ಸೂಕ್ಷ್ಮತೆ ನೋಡಿ ಘೋಷಣೆ ಮಾಡುವ ಸಾಧ್ಯತೆ ಇದೆ‌. ಬದಲಾವಣೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ‌. ನಾಲ್ಕು ರಾಜ್ಯ ಮುಗಿದ ಬಳಿಕ ಚರ್ಚೆ ಮಾಡಲಾಗುತ್ತದೆ ಎಂದು ಬಂಗಾರಪ್ಪ ಹೇಳಿದ್ದಾರೆ.

ನಾನು, ನಿನ್ನೆ ರಾತ್ರಿ ಕೇಂದ್ರ ಸಚಿವ ಗಡ್ಕರಿಯನ್ನು ಭೇಟಿಯಾಗಿದ್ದೆ, ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗಿದೆ‌. ದೆಹಲಿಯ ಭೇಟಿ ರಾಜಕೀಯವಾಗಿ ಹೆಚ್ಚು ಏನಿಲ್ಲ. ನಮ್ಮ ಮಾತುಗಳು ಹಾಗೂ ಅಭಿಪ್ರಾಯಗಳನ್ನ ವರಿಷ್ಠರಿಗೆ ತಲುಪಿಸಲಾಗಿದೆ. ವಸ್ತು ಸ್ಥಿತಿ ಅರಿತಿದ್ದಾರೆ, ವರಿಷ್ಠರ ತಿರ್ಮಾನಕ್ಕೆ ನಾವೆಲ್ಲ ಬದ್ದ‌. ರಾಜ್ಯ ಸರ್ಕಾರದ ತಪ್ಪುಗಳ ಬಗ್ಗೆ ಅವಕಾಶ ಸಿಕ್ಕರೂ ಅದು ದುರ್ಬಳಕೆ ಆಗಿದೆ. ಸಿಎಂ ಸಿದ್ದರಾಮಯ್ಯ ವೈಪಲ್ಯ ಆದಮೇಲೆ ತಪ್ಪು ಮಾಡಿದ ಮೇಲೆ ಜನಾಭಿಪ್ರಾಯ ಹಾಗೂ ಜನಾಂದೋಲನ ಮೂಡಿಸಲು ರಾಜ್ಯ ಬಿಜೆಪಿಯಿಂದ ಸಾಧ್ಯ ಆಗಲಿಲ್ಲ, ಈ ಬಗ್ಗೆ ವರಿಷ್ಠರ ಜೊತೆಗೆ ಮಾತಾಡಿ, ಹೋರಾಟ ಮಾಡಲಾಯಿತು ಎಂದು ಬಂಗಾರಪ್ಪ ತಿಳಿಸಿದರು.

ಸಿದ್ದರಾಮಯ್ಯ ವಾಲ್ಮೀಕಿ ಹಗರಣ ಬಗ್ಗೆ 187 ಕೋಟಿ ಅಲ್ಲ 87 ಕೋಟಿ ಅಂತಾ ತಪ್ಪು ಒಪ್ಪಿಗೆ ಹೇಳಿದ್ದರು. ಆ ಬಗ್ಗೆ ಅದು ಅಲ್ಲೆ ನಿಂತಿತ್ತು. ಎಸ್ ಐ ಟಿ ಮಾಡಿದ್ರು ಅದು ಆಗಲ್ಲ ಅಂತಾ ನಾವು ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಯತ್ನಾಳ್ ರು ಹೈಕೋರ್ಟ್ ಮೊರೆ ಹೋದ್ವಿ‌. ಕೋರ್ಟ್ ಈಗ ಸಿಬಿಐ ತನಿಖೆಗೆ ಅವಕಾಶ ನೀಡಿದೆ. ಪರಿಶಿಷ್ಟರಿಗೆ ಸೇರಿದ ಹಣ ದುರ್ಬಳಕೆ ಆಗಿದೆ ಅಂತಾ ಸಿಬಿಐ ತನಿಖೆಗೆ ಆದೇಶ ನೀಡಿದೆ‌. ಈ ಬಗ್ಗೆ ಮಾತಾಡಲು ದೆಹಲಿಗೆ ಬಂದಿದ್ದೆ ಎಂದರು

ಅಲ್ಲದೆ ವಾಲ್ಮೀಕಿ ಹಗರಣ ಬಗ್ಗೆ ಹಿರಿಯ ಅಧಿಕಾರಿಗಳ ಭೇಟಿ ಮಾಡಲಾಗ್ತಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ಕುಸಿದಿದೆ‌. ಈ ಸಂದರ್ಭದಲ್ಲಿ ಬಿಜೆಪಿ ಹೋರಾಟ ಮಾಡಿದರೇ 2028 ರಲ್ಲಿ ಬಹುಮತ ತರಲು ಸಾಧ್ಯ. ನಾವು ಯಾವಾಗಲೂ ಹೈಕಮಾಂಡ್ ಜೊತೆ ಹಿಂದೆ ಈಗ ಹಾಗೂ ಮುಂದೆಯೂ ಇರ್ತಿವಿ. ಆದರೆ ಅನಿಸಿಕೆಗಳನ್ನ ಸರಿಯಾಗಿ ಹೇಳಬೇಕು. ರಾಜ್ಯದಲ್ಲಿ ಮೂಡಾ ಒಂದೇ ಅಲ್ಲ ಅನೇಕ ವಿಚಾರಗಳಿವೆ. ಕೇಂದ್ರದ ನಾಯಕರ ಕೂಡ ಗಮನಹರಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಾವು ಎತ್ತಿಕೊಂಡ ಹೋರಾಟಗಳಿಗೆ ರಾಜ್ಯ ಸಂಘಟನೆ ನಮಗೆ ಸಹಕಾರ ಕೊಡಲಿಲ್ಲ. ದೆಹಲಿಯವರು ನಮ್ಮ ಬೆಂಬಲಕ್ಕೆ ನಿಂತರು. ಕರ್ನಾಟಕ ಸರ್ಕಾರ ಇದುವರೆಗೂ ಬಾಂಗ್ಲಾ ನುಸುಳುಕೋರರ ಬಗ್ಗೆ ಗಮನ ಹರಿಸಿಲ್ಲ. 120 ಜನ ಅಂತಾ ಗೃಹ ಸಚಿವ ಡಾ ಪರಮೇಶ್ವರ್ ಹೇಳ್ತಾರೆ. ಆದರೆ ಲಕ್ಷಾಂತರ ಮಂದಿ ಬೆಂಗಳೂರು ಸೇರಿದಂತೆ ಹಲವು ಕಡೆ ಇದಾರೆ. ವಂಶವೃಕ್ಷ ಅಟ್ಯಾಚ್ ಮಾಡಿದರೆ ಎಲ್ಲಾ ಸಿಗಲಿದೆ. ಅನದಿಕೃತ ಬಗ್ಗೆ ತಿಳಿಯಲಿದೆ. ಬೇರೆ ರಾಜ್ಯಗಳ ರೀತಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿ ಕ್ರಮ ವಹಿಸಬೇಕಿದೆ‌ ಎಂದು ದೆಹಲಿಯಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಇದನ್ನೂ ಓದಿ: Puttur: ಅನುಮತಿ ರಹಿತ ಪ್ರತಿಭಟನೆ ಮಾಡಿದ SDPI: 30 ಜನರ ವಿರುದ್ಧ ಪ್ರಕರಣ ದಾಖಲು

Comments are closed.