Bengaluru Stampede: ಬೆಂಗಳೂರಿನ ಕಾಲ್ತುಳಿತ ಪ್ರಕರಣ – ಆರ್‌ಸಿಬಿ, ಕೆಎಸ್‌ಸಿಎಯಿಂದ ಲಿಖಿತ ಉತ್ತರ ಕೇಳಿದ ಬಿಸಿಸಿಐ ಒಂಬುಡ್ಸ್‌ಮನ್

Share the Article

Bengaluru Stampede: ಇದೀಗ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿದ ಬಗ್ಗೆ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ಬಿಸಿಸಿಐ ಒಂಬುಡ್ಸ್‌ಮನ್ -ಕಮ್-ಎಥಿಕ್ಸ್ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಆರ್‌ಸಿಬಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘಕ್ಕೆ (ಕೆಎಸ್‌ಸಿಎ) ಸೂಚಿಸಿದ್ದಾರೆ.

IPS ಅಧಿಕಾರಿ ವಿಕಾಸ್ ಕುಮಾ‌ರ್ ದೂರಿನ ಮೇರೆಗೆ ಈ ನಿರ್ದೇಶನ ನೀಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಫ್ರಾಂಚೈಸಿಯ ಮಾರಾಟ ನಿಷೇಧಿಸುವಂತೆ ಅವರು ಒಂಬುಡ್ಸ್‌ಮನ್‌ಗೆ ಒತ್ತಾಯಿಸಿದರು. ಒಂಬುಡ್ಸ್‌ಮನ್ ಆರ್‌ಸಿಬಿ ಮತ್ತು ಕೆಎಸ್‌ಸಿಎಗೆ ಪ್ರತಿಕ್ರಿಯಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದಾರೆ.

– ಪಿಟಿಐ

ಇದನ್ನೂ ಓದಿ: Weather Report: ಕರ್ನಾಟಕದ ಹವಾಮಾನ ವರದಿ : ಎಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ?

Comments are closed.