Chikkamagaluru: ಗ್ಯಾಸ್ ಎಂದು ಮಾತ್ರೆ ನುಂಗಿದ 29 ರ ಹರೆಯದ ಯುವಕ ಹೃದಯಾಘಾತಕ್ಕೆ ಸಾವು

Chikkamagaluru: ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಇದೀಗ ಜಿಲ್ಲೆಯಲ್ಲಿ 29 ವರ್ಷ ಪ್ರಾಯದ ತೆಂಗಿನಕಾಯಿ ವ್ಯಾಪಾರಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ತರೀಕೆರೆ ತಾಲೂಕಿನ ಶಿವನಿ ಗ್ರಾಮದ 29 ವರ್ಷದ ಹರೀಶ್ ಮೃತ ಯುವಕ.
ಹರೀಶ್ ಗುರುವಾರ (ಜು 03) ಬೆಳಗಿನ ಜಾವ ವಾಂತಿ ಮಾಡಿಕೊಂಡಿದ್ದರು. ಗ್ಯಾಸ್ಟ್ರಿಕ್ ಆಗಿರಬಹುದು ಎಂದು ಮನೆಯವರು ಮಾತ್ರೆ ನುಂಗಿಸಿ ಮಲಗಿಸಿದ್ದರು. ಆದರೆ 3.30ಕ್ಕೆ ಮತ್ತೆ ವಾಂತಿ ಮಾಡಿ ಕುಸಿದು ಬಿದ್ದಿದ್ದು, ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವಿಗೀಡಾಗಿದ್ದಾರೆ.
ಹರೀಶ್ ಅವಿವಾಹಿತರಾಗಿದ್ದು, ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದರು.
Comments are closed.