Siddaramaiah: ದ್ವೇಷ ಭಾಷಣ, ನಕಲಿ ಸುದ್ದಿಗಳ ವಿರುದ್ಧ ಸ್ವಯಂಪ್ರೇರಿತ FIR ದಾಖಲಿಸಿ: ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ!

Siddaramaiah: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಆಯೋಜಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ (Siddaramaiah) ಅವರು, ದ್ವೇಷ ಭಾಷಣ, ನಕಲಿ ಸುದ್ದಿಗಳ ದ್ವೇಷ ಭಾಷಣ, ನಕಲಿ ಸುದ್ದಿಗಳ ವಿರುದ್ಧ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುತ್ತಿದ್ದು, ಪೊಲೀಸರು ಇಂತಹ ಬೆಳವಣಿಗೆ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಹೇಳಿದ್ದಾರೆ.

ದ್ವೇಷ ಭಾಷಣದ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ನಮಗೆ ದ್ವೇಷವಿಲ್ಲದ ಸಮಾಜ ಬೇಕು, ಆದರೆ, ಕೆಲವರು ಅಶಾಂತಿಯುಕ್ತ ಸಮಾಜವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮಗಳು ಸಿಎಂ ಅಥವಾ ಪ್ರಧಾನಿಯನ್ನು ಮೆಚ್ಚಿಸುವಲ್ಲಿ ತೊಡಗಬಾರದು, ಸತ್ಯಗಳನ್ನಷ್ಟೇ ವರದಿ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Suicide: ಪೋಷಕರು ಆಟಕ್ಕಿಂತ ಓದು ಮುಖ್ಯ ಎಂದಿದ್ದೆ ತಪ್ಪಾಯ್ತು?! 14 ವರ್ಷದ ಬಾಲಕ ಆತ್ಮಹತ್ಯೆ!
Comments are closed.