Home News UP: ತಾನು ರಕ್ಷಿಸಿದ್ದ ಬೀದಿ ನಾಯಿಯಿಂದಲೇ ಖ್ಯಾತ ಕಬಡ್ಡಿ ಆಟಗಾರ ಸಾವು!!

UP: ತಾನು ರಕ್ಷಿಸಿದ್ದ ಬೀದಿ ನಾಯಿಯಿಂದಲೇ ಖ್ಯಾತ ಕಬಡ್ಡಿ ಆಟಗಾರ ಸಾವು!!

Hindu neighbor gifts plot of land

Hindu neighbour gifts land to Muslim journalist

UP: ಉತ್ತರ ಪ್ರದೇಶದ ಖ್ಯಾತ ಕಬ್ಬಡಿ ಆಟಗಾರ ಬ್ರಿಜೇಶ್ ಅವರು ತಾನು ರಕ್ಷಿಸಿದ್ದ ಬೀದಿ ನಾಯಿ ಇಂದಲೇ ಸಾವಿಗೀಡಾಗಿರುವಂತಹ ದಾರುಣ ಘಟನೆ ಬೆಳಕಿಗೆ ಬಂದಿದೆ.

ಯಸ್, ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಾಯಿ ಕಡಿತದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ. ಮಾರ್ಚ್ನಲ್ಲಿ ನಾಯಿಯೊಂದು ಚರಂಡಿಗೆ ಬಿದ್ದಿತ್ತು. ಅದನ್ನು ರಕ್ಷಿಸುವ ಸಮಯದಲ್ಲಿ ಬಲಗೈಗೆ ಕಚ್ಚಿತ್ತು. ಅದನ್ನು ಸಣ್ಣ ಗಾಯವೆಂದು ಭಾವಿಸಿ, ನಿರ್ಲಕ್ಷಿಸಿದ್ದರು. ರೇಬಿಸ್ ಲಸಿಕೆಯನ್ನೂ ಪಡೆದಿರಲಿಲ್ಲ.. ಆದರೀಗ ರೇಬಿಸ್ ರೋಗಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದಾರೆ.

ಅವರ ಕೊನೆಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೇಬಿಸ್ ರೋಗಕ್ಕೆ ತುತ್ತಾಗಿ ಹಾಸಿಗೆಯ ಮೇಲೆ ಮಲಗಿ ನೋವಿನಿಂದ ಒದ್ದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Bengaluru: ಬೆಂಗಳೂರಿಲ್ಲೊಂದು ವಿಚಿತ್ರ ಘಟನೆ – ಎದೆ ನೋವೆಂದು ನಡೆದುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿಗೆ ಕೆಲವೇ ಕ್ಷಣಗಳಲ್ಲಿ ‘ಬ್ರೈನ್ ಡೆಡ್’