Chinnaswamy Stampede: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಲಿತ ಪ್ರಕರಣ: ಐಪಿಎಸ್‌ ವಿಕಾಸ್‌ ಕುಮಾರ್‌ ಅಮಾನತು ರದ್ದು, ಹೈಕೋರ್ಟ್‌ ಮೊರೆಹೋದ ಸರಕಾರ

Share the Article

Chinnaswamy Stampede: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿದ ಸಿಎಟಿ ಕ್ರಮದ ವಿರುದ್ಧ ಕರ್ನಾಟಕ ಸರಕಾರ ಹೈಕೋರ್ಟ್‌ ಮೆಟ್ಟಿಲೇರಿದೆ. ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸರಕಾರದ ಪರ ಎಜಿ ಶಶಿಕಿರಣ್‌ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ.

ಇಂದೇ ವಿಚಾರಣೆಯಾಗಬೇಕೆಂಬ ತರಾತುರಿ ಯಾಕೆ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಕರ್ನಾಟಕ ಸರಕಾರ ಅರ್ಜಿಯನ್ನು ನೋಡಿ ಪ್ರಶ್ನಿಸಿದೆ. ಇದಕ್ಕೆ ಉತ್ತರ ನೀಡಿದ ಎಜಿ ಶಶಿಕಿರಣ್‌ ಶೆಟ್ಟಿ, ಸಿಎಟಿ ಆದೇಶದ ಕಾರಣ ಅಧಿಕಾರ ವಹಿಸಿಕೊಳ್ಳಲು ಅಧಿಕಾರಿ ಮುಂದಾಗಿದ್ದಾರೆ. ಹೀಗಾಗಿ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: Indian Railway: ರೈಲಿನಲ್ಲಿ ಒಣಕೊಬ್ಬರಿ ಕೊಂಡೊಯ್ದರೆ ದಂಡ, ಜೈಲು ಫಿಕ್ಸ್ !! ಯಾಕೆ ಗೊತ್ತಾ?

Comments are closed.