Bhavya Gowda: ಅಗ್ರಿಮೆಂಟ್ ಮುರಿದ ಬಿಗ್ ಬಾಸ್ ಖ್ಯಾತಿಯ ಭವ್ಯ ಗೌಡ – ಕೋರ್ಟ್ ಮೆಟ್ಟಿಲೇರಿದ ಕಲರ್ಸ್ ವಾಹಿನಿ

Share the Article

Bhavya Gowda : ಬಿಗ್ ಬಾಸ್ ಖ್ಯಾತಿಯ ಭವ್ಯ ಗೌಡ ಅವರು ಕಲರ್ಸ್ ವಾಹಿನಿಯೊಂದಿಗೆ ಮಾಡಿಕೊಂಡ ಅಗ್ರಿಮೆಂಟ್ ಒಂದನ್ನು ಮುರಿದಿದ್ದು ಇದೀಗ ಕಲರ್ಸ್ ಕನ್ನಡ ವಾಹಿನಿಯವರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಹೌದು, ಬಿಗ್ ಬಾಸ್ ಮೂಲಕ ಖ್ಯಾತಿಗಳಿಸಿದ ಭವ್ಯ ಗೌಡ ಅವರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀರಿಯಲ್‌ನಲ್ಲಿ ನಟಿಸುವ ಅವಕಾಶವೂ ಅವರನ್ನ ಹುಡುಕಿಕೊಂಡು ಬಂದಿತ್ತು. ಆದರೆ, ಅದನ್ನ ಭವ್ಯಾ ಗೌಡ ಒಪ್ಪಲಿಲ್ಲವಂತೆ. ಅದಾಗಲೇ ಮಾಡಿಕೊಂಡಿದ್ದ ಒಪ್ಪಂದವನ್ನ ಮುರಿದ ಭವ್ಯಾ ಗೌಡ ‘ಕರ್ಣ’ ಧಾರಾವಾಹಿ ಕಡೆ ಮುಖ ಮಾಡಿದರು.

ಹೀಗಾಗಿ ಕರಾರು ಮುರಿದ ಭವ್ಯಾ ಗೌಡ ವಿರುದ್ಧ ಕೋರ್ಟ್‌ನಲ್ಲಿ ಕೇಸ್‌ ಹಾಕಲಾಗಿದೆ. ಪರಿಣಾಮ, ಜೂನ್‌ 16 ರಿಂದ ಆರಂಭವಾಗಬೇಕಿತ್ತು ‘ಕರ್ಣ’ ಧಾರಾವಾಹಿಯ ಪ್ರಸಾರಕ್ಕೆ ಸ್ಟೇ ಆರ್ಡರ್‌ ಬಂದಿದೆ.

ಇದನ್ನೂ ಓದಿ: Mallapuram: ಮಗುವಿಗೆ ಮದ್ದು ನೀಡಲು ನಿರಾಕರಿಸಿದ ಸುಶಿಕ್ಷಿತ ಪೋಷಕರು: ಜಾಂಡೀಸ್‌ಗೆ ಒಂದು ವರ್ಷದ ಮಗು ಸಾವು

Comments are closed.