Bengaluru: ಬೆಂಗಳೂರಿಲ್ಲೊಂದು ವಿಚಿತ್ರ ಘಟನೆ – ಎದೆ ನೋವೆಂದು ನಡೆದುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿಗೆ ಕೆಲವೇ ಕ್ಷಣಗಳಲ್ಲಿ ‘ಬ್ರೈನ್ ಡೆಡ್’

Share the Article

Bengaluru : ಚಿಕಿತ್ಸೆಗಾಗಿ ಆಸ್ವತ್ರೆಗೆ ನಡೆದುಕೊಂಡು ಬಂದ ವ್ಯಕ್ತಿಯ ಮೆದುಳು ಕೆಲವೆ ನಿಮಿಷಗಳಲ್ಲಿ ನಿಷ್ಕ್ರಿಯವಾಗಿರುವಂತಹ (brain dead) ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಈ ಒಂದು ವಿಚಿತ್ರ ಘಟನೆ ನಡೆದಿದೆ. ಹೊಸಕೋಟೆಯ ನಿವಾಸಿ ಕೋನಪ್ಪ (52) ಬ್ರೈನ್ ಡೆಡ್ ಆದ ವ್ಯಕ್ತಿ. ಇತ್ತ ಬ್ರೈನ್ ಡೆಡ್ ವಿಷಯ ತಿಳಿದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ನಡೆದದ್ದೇನು?

ಬೆಳಗ್ಗೆಯಿಂದ ಕೂಡ ಲವಲವಿಕೆಯಿಂದಲ್ಲೇ ಇದ್ದ ಕೋನಪ್ಪ, ಏಕಾಏಕಿ ಎದೆ ನೋವು ಅಂತ ನಡೆದುಕೊಂಡು ಸಿಲಿಕಾನ್ ಸಿಟಿ ಆಸ್ಪತ್ರೆಗೆ ಬಂದಿದ್ದಾರೆ. ಈ‌ ವೇಳೆ ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಂತೆ ಕಾರ್ಡಿಯಾಕ್ ಅರೆಸ್ಟ್ನಿಂದ ಕುಸಿದು ಬಿದಿದ್ದಾರೆ. ತಕ್ಷಣ ಮತ್ತೊಂದು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲು ಮುಂದಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಮೆದುಳು ನಿಷ್ಕ್ರಿಯಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯರು ಇತ್ತೀಚೆಗೆ ಕಾರ್ಡಿಯಾಕ್ ಅರೆಸ್ಟ್ನಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಎನ್ನುತಾರೆ. ಕೋನಪ್ಪ ಆಸ್ಪತ್ರೆಗೆ ನಡೆದುಕೊಂಡು ಬರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: Mangaluru : ದಕ್ಷಿಣ ಕನ್ನಡದ ಸಾರಿಗೆ ಇಲಾಖೆಯ ಮಹಾ ವಂಚನೆ ಬಯಲು – ಕೋಟಿ ಬೆಲೆಯ ಕಾರಿಗೆ 8 ವರ್ಷಗಳಿಂದ ಲಕ್ಷ ಬೆಲೆಯ ಕಾರಿನ ಮಾಡೆಲ್ ನಂಬರ್ !!

Comments are closed.