Chikka magaluru: ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಎತ್ತಿನ ಭುಜ ಚಾರಣಕ್ಕೆ ನಿರ್ಬಂಧ!

Chikkamagaluru: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಮಂಜು ಕವಿಯುತ್ತಿರುವ ಕಾರಣದಿಂದ, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಮಳೆಗಾಲದಲ್ಲಿ ಪ್ರವಾಸಿಗರಿಗೆ ಅನಾಹುತ ಎದುರಾದರೆ ಅವರನ್ನು ರಕ್ಷಣೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಎತ್ತಿನ ಭುಜದ ಮೇಲ್ಬಾಗಕ್ಕೆ ಯಾವುದೇ ವಾಹನಗಳ ಸಂಚಾರ ಇಲ್ಲ. ಹಾಗಾಗಿ ಪ್ರವಾಸಿಗರಿಗೆ ಅಪಾಯವಾದರೆ ಅವರನ್ನು ಹೊತ್ತುಕೊಂಡೇ ಕೆಳಕ್ಕೆ ತರಬೇಕು. ಈ ಎಲ್ಲಾ ಸಮಸ್ಯೆಗಳ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Hasana: ಹಾಸನ: ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಸಾವು
Comments are closed.