Home News Mangalore: ಮಂಗಳೂರು ನ್ಯಾಯಾಲಯಕ್ಕೆ ಉಗ್ರ ಮೊಹಮ್ಮದ್‌ ಅಕ್ಬರ್‌ ಹಾಜರು: ವಿಚಾರಣೆ ಜು.23 ಕ್ಕೆ ಮುಂದೂಡಿಕೆ

Mangalore: ಮಂಗಳೂರು ನ್ಯಾಯಾಲಯಕ್ಕೆ ಉಗ್ರ ಮೊಹಮ್ಮದ್‌ ಅಕ್ಬರ್‌ ಹಾಜರು: ವಿಚಾರಣೆ ಜು.23 ಕ್ಕೆ ಮುಂದೂಡಿಕೆ

Hindu neighbor gifts plot of land

Hindu neighbour gifts land to Muslim journalist

Mangaluru: ಹೈದರಾಬಾದ್‌ನಲ್ಲಿ 2007 ರಲ್ಲಿ ನಡೆದ ಅವಳಿ ಬಾಂಬ್‌ಬ್ಲಾಸ್ಟ್‌ ಪ್ರಕರಣದ ಮತ್ತು 2008 ರಲ್ಲಿ ಮುಂಬಯಿ ಸರಣಿ ಸ್ಫೋಟದ ಆರೋಪಿಗಳಲ್ಲಿ ಓರ್ವನಾದ ಉಗ್ರ ಮೊಹಮ್ಮದ್‌ ಅಕ್ಬರ್‌ ಇಸ್ಮಾಯಿಲ್‌ ಚೌಧರಿ ಎಂಬಾತನನ್ನು ಉಳ್ಳಾಲ ಠಾಣೆಯಲ್ಲಿ ಯುಎಪಿ ಆಕ್ಟ್‌ ಮತ್ತು ಎಕ್ಸ್‌ಪ್ಲೋಸಿವ್‌ ಆಕ್ಟ್‌ ನಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉಳ್ಳಾಲ ಪೊಲೀಸರು ಈತನನ್ನು ಬಾಡಿ ವಾರೆಂಟ್‌ ಮೂಲಕ ತೆಲಂಗಾಣ ಪೊಲೀಸರ ಸಮಕ್ಷಮ ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸದಿದಾರೆ. ಈತ ತೆಲಂಗಾಣದ ಚೆರ್ಲಪಲ್ಲಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ.

ವಿಚಾರಣೆ ಮಾಡಿದ ನ್ಯಾಯಾಲಯವು ವಕೀಲರನ್ನು ನೇಮಿಸಲು ಅವಕಾಶ ಕಲ್ಪಿಸಿ ವಿಚಾರಣೆಯನ್ನು ಜು.23 ಕ್ಕೆ ಮುಂದೂಡಿದೆ. ಹಾಗೂ ವಾಪಾಸು ತೆಲಂಗಾಣಕ್ಕೆ ಆತನನ್ನು ಕರೆದುಕೊಂಡು ಹೋಗಲಾಗಿದೆ.

ಮೊಹಮ್ಮದ್‌ ಅಕ್ಬರ್‌ ಇಸ್ಮಾಯಿಲ್‌ ಚೌಧರಿ ಮತ್ತು ಅನೀಖ್‌ ಶಫೀಕ್‌ ಸಯ್ಯದ್‌ ಎಂಬಾತನಿಗೆ ಈಗಾಗಲೇ ಹೈದರಾಬಾದ್‌ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನು ಮೆಟ್ರೋ ಪೊಲಿಟನ್‌ ನ್ಯಾಯಾಲಯ ಪ್ರಕಟಿಸಿದೆ. ಮೂರನೇ ಆರೋಪಿ ಮೊಹಮ್ಮದ್‌ ತಾರಿಕ್‌ ಅಂಜುಂ ಇವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2007ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ನಲ್ಲಿ ಈತ ಭಾಗಿಯಾಗಿದ್ದು, ಸ್ಫೋಟಕಗಳನ್ನು ಉಳ್ಳಾಲ ಚೆಂಬುಗುಡ್ಡೆ ಮುಕ್ಕಚ್ಚೇರಿಯಿಂದ ಪೂರೈಕೆ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಪುಣೆಯ ಕೊಂಧ್ವಾ ಖುದ್‌ನ ಮಿಥಾ ನಗರ ಪ್ರದೇಶದ ನಿವಾಸಿಯಾದ ಈತ ಯಾಸೀನ್‌ ಭಟ್ಕಳ ಮತ್ತು ಇಕ್ಬಾಲ್‌ ಭಟ್ಕಳ ಇವರ ಮೂಲ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗೆ ಸೇರಿದ್ದ. ಈತ ಕಂಪ್ಯೂಟರ್‌ ಹಾರ್ಡ್‌ವೇರ್‌ ಎಕ್ಸ್‌ಪರ್ಟ್‌ ಆಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: BJP: ವಿವಿಧ ರಾಜ್ಯಗಳಿಗೆ ರಾಜ್ಯಾಧ್ಯಕ್ಷರನ್ನು ನೇಮಿಸಿದ ಬಿಜೆಪಿ ಹೈಕಮಾಂಡ್ – ಕರ್ನಾಟಕಕ್ಕೆ ಯಾರು?