Bengaluru stampede: ಕಾಲ್ತುಳಿತ ಪ್ರಕರಣ – ಪೊಲೀಸ್ ಅಧಿಕಾರಿ ಅಮಾನತು ರದ್ದು ಮಾಡಿ ಸಿಎಟಿಯಿಂದ ಮಹತ್ವದ ಆದೇಶ

Bengaluru stampede: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಟಿಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ರದ್ದುಪಡಿಸಿ ಸಿಎಟಿ ಮಹತ್ವದ ಆದೇಶ ಹೊರಡಿಸಿದೆ. ವಿಕಾಸ್ ಅವರನ್ನು ಸೇವೆಯಲ್ಲಿ ಮುಂದುವರೆಸಲು ಸಿಎಟಿ ಆದೇಶ ಮಾಡಿದೆ.

ಅಮಾನತುಗೊಂಡ ತಿಂಗಳನ್ನು ಕರ್ತವ್ಯದ ತಿಂಗಳು ಎಂದು ಪರಿಗಣಿಸಬೇಕು. ಅಮಾನತುಗೊಂಡ ಇತರ ಅಧಿಕಾರಿಗಳಿಗೆ ಅದೇ ಪ್ರಯೋಜನವನ್ನು ನೀಡುವ ಬಗ್ಗೆ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರದ ಅಮಾನತು ಆದೇಶದ ವಿರುದ್ಧ ವಿಕಾಸ್ ಕುಮಾರ್ ಸಿಎಟಿ ಮೆಟ್ಟಿಲೇರಿದ್ದರು. ಇದೀಗ ಅಮಾನತು ಆದೇಶ ಮಾಡಿದ್ದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಜೂನ್ 6ರಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ವಿಜಯೋತ್ಸವದ ಕಾರ್ಯಕ್ರಮವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ ನಿರೀಕ್ಷೆಗಿಂತ ಹೆಚ್ಚಿನ ಜನ ಸೇರಿದ್ದರಿಂದ ಅಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದರೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯ ಹಿಂದೆ ಪೊಲೀಸ್ ಅಧಿಕಾರಗಳ ನಿರ್ಲಕ್ಷ್ಯವೇ ಕಾರಣ ಎಂದು ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿತ್ತು.
ಇದನ್ನೂ ಓದಿ: Udupi: ಪ್ರೀತಿಗೆ ಮನೆಯವರ ವಿರೋಧ: ಕೇರಳದಲ್ಲಿ ಮನೆ ಬಿಟ್ಟು ಹೋಗಿದ್ದ ಜೋಡಿ ಉಡುಪಿಯಲ್ಲಿ ಪತ್ತೆ!
Comments are closed.