DK Shivakumar: ಡಿಕೆಶಿ ಸಿಎಂ ಆಗೋದ್ನ ಯಾರೂ ತಡೆಯಲಾಗದು – ಜಾತಕದಲ್ಲಿ ಸಿಎಂ ಆಗುವ ಯೋಗ ಇದೆ – ಡಾ. ಬಿ.ಸಿ‌ ವೆಂಕಟೇಶ್ ಗುರೂಜಿ ಭವಿಷ್ಯ

Share the Article

DK Shivakumar: ಇದೇ ನವಂಬರ್ಗೆ ಕೊಟ್ಟ ಮಾತಿನಂತೆ ಸಿಎಂ ಸಿದ್ದರಾಮಯ್ಯನವರ ಅಧಿಕಾರವಧಿ ಮುಕ್ತಾಯಗೊಳ್ಳುತ್ತದೆ. ಅಂದಿನ ಮಾತುಕಥೆ ಪ್ರಕಾರ ಎರಡುವರೆ ವರ್ಷ ಸಿದ್ದರಾಮಯ್ಯ ಸಿಎಂ ಆದ್ರೆ ಮತ್ತೆ ಎರಡುವರೆ ವರ್ಷ ಡಿಕೆಶಿ ಕುರ್ಚಿ ಏರುತ್ತಾರೆ ಅನ್ನೋದು. ಆದರೆ ಡಿಕೆಶಿಗೆ ಕುರ್ಚಿಯನ್ನು ಸಿಎಂ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಬಿಟ್ಟುಕೊಡುತ್ತಾರೆ ಅನ್ನೋದು ಅನುಮಾಣ. ಆದರೆ ಡಿಕೆಶಿ ಸುಮ್ಮನಿರುತ್ತಾರೆ ಅನ್ನೋದು ಡೌಡು. ಈಗಾಗಲೇ ಅವರವರ ಬಣದ ಸರ್ಕಸ್ ಆರಂಭವಾಗಿದೆ.

ಈ ಮಧ್ಯೆ ಡಿಕೆಶಿಯವರಿಗೆ ಸಿಎಂ ಆಗೋ ಯೋಗ ಇದೆ, ಆಗೇ ಆಗ್ತಾರೆ, 2031ರವರೆಗೆ ರಾಜನಂತೆ ಇರ್ತಾರೆ. ಡಿಕೆಶಿಯವರ ಜಾತಕದಲ್ಲಿ ಸಿಎಂ ಆಗುವ ಯೋಗ ಇದೆ ಎಂದು ಕೊಪ್ಪ ತಾಲೂಕಿನ ಪಂಚಲಿಂಗೇಶ್ವರ ಮಲಾಯಾಚಲ ಗೋವಂಶ ಆಶ್ರಮದ‌ ಡಾ. ಬಿ.ಸಿ‌ ವೆಂಕಟೇಶ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಒಂದೂವರೆ ವರ್ಷದ ಹಿಂದೆಯೇ ಅವರಿಗೆ ಹೇಳಿ ಮಂತ್ರಾಕ್ಷತೆ ಕೊಟ್ಟು ಬಂದಿದ್ದೇನೆ. ಡಿಕೆಶಿಗಾಗಿಯೇ ನಿತ್ಯ ವೆಂಕಟೇಶ ಗುರೂಜಿ ದುರ್ಗಾ ಪಾರಾಯಣ ಮಾಡ್ತಿದ್ದಾರೆ. ಅವರು ಸಿಎಂ ಆಗೇ ಆಗ್ತಾರೆ, ಒಳಗಿಂದ ಜೊತೆಗಿದ್ದವರೇ ಮೋಸ ಮಾಡಿದ್ರೆ ಕಷ್ಟ, ಅವರ ಜಾತಕದಲ್ಲಿ ಯೋಗವಂತೂ ಇದೆ. ಸಾಗರದ ಕೊಟ್ರೇಶಯ್ಯ ಈರೇಮಠ್ ಜೊತೆ 3 ವರ್ಷದಿಂದ ಜಾತಕ ಅಧ್ಯಯನ ಮಾಡ್ತಿರೋ ವೆಂಕಟೇಶ ಗುರೂಜಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: IBPS PO Recruitment 2025: IBPS ನಿಂದ 5208 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಬ್ಯಾಂಕ್ ಅಧಿಕಾರಿಯಾಗಲು ಸುವರ್ಣ ಅವಕಾಶ

Comments are closed.