Nandini: ಭಾರತದ ಟಾಪ್ ಫುಡ್ ಬ್ರ್ಯಾಂಡ್ ಗಳಲ್ಲಿ ಕರ್ನಾಟಕದ ನಂದಿನಿಗೆ 4ನೇ ಸ್ಥಾನ- ಹಾಗಿದ್ರೆ ನಂ.1 ಯಾರು?

Share the Article

Nandini: ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್‌ ನಂದಿನಿ ಇದೀಗ ಮತ್ತೊಂದು ಮನ್ನಣೆಗೆ ಪಾತ್ರವಾಗಿದೆ. ಏನೆಂದರೆ ಯುಕೆ ಮೂಲದ ಬ್ರ್ಯಾಂಡ್ ಫಿನಾನ್ಸ್ ಕನ್ಸಲ್ಟೆನ್ಸಿ ಭಾರತದ ಟಾಪ್ ಫುಡ್ ಬ್ರ್ಯಾಂಡ್ ಯಾವುದು ಎಂದು ಸಮೀಕ್ಷೆ ನಡೆಸಿದ್ದು ಕರ್ನಾಟಕದ ಹೆಮ್ಮೆಯ ಹಾಲು ಹಾಲಿನ ಉತ್ಪನ್ನದ ಬ್ರ್ಯಾಂಡ್ ನಂದಿನ 4ನೇ ಸ್ಥಾನ ಪಡೆದುಕೊಂಡಿದೆ.

ಹೌದು, ಯುಕೆ ಮೂಲದ ಬ್ರ್ಯಾಂಡ್ ಫಿನಾನ್ಸ್ ಕನ್ಸಲ್ಟೆನ್ಸಿ ಭಾರತದ ಟಾಪ್ ಫುಡ್ ಬ್ರ್ಯಾಂಡ್ ಯಾವುದು ಎಂದು ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಹೆಮ್ಮೆಯ ಹಾಲು ಹಾಲಿನ ಉತ್ಪನ್ನದ ಬ್ರ್ಯಾಂಡ್ ನಂದಿನ 4ನೇ ಸ್ಥಾನ ಪಡೆದುಕೊಂಡಿದೆ. ಟಾಪ್ 5 ಫುಡ್ ಉತ್ಪನ್ನಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಯಾರಿಗೆ ಅನ್ನೋ ಕುತೂಹಲಕ್ಕೂ ಉತ್ತರ ಸಿಕ್ಕಿದೆ.

“ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ಉತ್ತಮ ಬ್ರ್ಯಾಂಡ್ಗಳ ಕುರಿತ ವರದಿಯಲ್ಲಿ ದೇಶೀಯ ಆಹಾರ ಮತ್ತು ಪಾನೀಯ ವಲಯದಲ್ಲಿ ಗುಜರಾತ್ ಮೂಲದ ಅಮೂಲ್ ಟಾಪ್-1, ಮದರ್ ಡೈರಿ ಟಾಪ್-2, ಬ್ರಿಟಾನಿಯಾ ಟಾಪ್-3, ಕೆಎಂಎಫ್ ನಂದಿನಿ ಟಾಪ್-4 ಹಾಗೂ ಡಾಬರ್ ಟಾಪ್-5ನೇ ಸ್ಥಾನವನ್ನು ಪಡೆದಿವೆ” ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಂದಹಾಗೆ ಬ್ರ್ಯಾಂಡ್ ಫಿನಾನ್ಸ್ ನಡೆಸಿದ ಸರ್ವೆಯಲ್ಲಿ ಭಾರತದ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಮೂಲ್ ಡೈರಿ ಪಡೆದುಕೊಂಡಿದೆ. ಬರೋಬ್ಬರಿ 4.1 ಬಿಲಿಯನ್ ಅಮೆರಿಕನ್ ಡಾಲರ್ ಬ್ರ್ಯಾಂಡ್ ವ್ಯಾಲ್ಯೂನೊಂದಿಗೆ ಅಮೂಲ್ ಮೊದಲ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಅಮೂಲ್ ಹಾಗೂ ನಂದಿನ ನಡುವೆ ತಿಕ್ಕಾಟ ನಡೆಯತ್ತಿದ್ದರೂ ದೇಶಾದ್ಯಂತ ಅಮೂಲ್ ಬ್ರ್ಯಾಂಡ್ ನಂ.1 ಎನಿಸಿಕೊಂಡಿದೆ.

ಇದನ್ನೂ ಓದಿ: LPG Gas Cylinder Price: ಗ್ರಾಹಕರಿಗೆ ಸಿಹಿ ಸುದ್ದಿ: LPG ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

Comments are closed.