Home News Heart Attack: ರಾಜ್ಯದಲ್ಲಿ ಹೆಚ್ಚಿದ ಹೃದಯಾಘಾತ ಪ್ರಕರಣ – ವರದಿ ನೀಡುವಂತೆ ಸಚಿವ ದಿನೇಶ್ ಗುಂಡುರಾವ್...

Heart Attack: ರಾಜ್ಯದಲ್ಲಿ ಹೆಚ್ಚಿದ ಹೃದಯಾಘಾತ ಪ್ರಕರಣ – ವರದಿ ನೀಡುವಂತೆ ಸಚಿವ ದಿನೇಶ್ ಗುಂಡುರಾವ್ ಸೂಚನೆ

Hindu neighbor gifts plot of land

Hindu neighbour gifts land to Muslim journalist

Heart Attack: ಹಾಸನ ನಡೆಯುತ್ತಿರುವ ಹೃದಯಾಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿ ತರಿಸೋದಕ್ಕೆ ಹೇಳಿದ್ದೀನಿ, ಜಯದೇವ ಆಸ್ಪತ್ರೆ ನಿರ್ದೇಶಕರ ನೇತೃತ್ವದಲ್ಲಿ ವರದಿಯನ್ನು ಕೇಳಿದ್ದೇನೆ. ಹಾಸದಲ್ಲಿ ಚಿಕ್ಕವಯಸ್ಸಿನವರು ಸಹ ಹೃದಯಾಘಾತಕ್ಕೆ ಒಳಗಾಗಿರೋದನ್ನು ಕಂಡು ಬಂದಿದೆ, ಇದಕ್ಕೆ ಏನು ಕಾರಣ ಅನ್ನೊದನ್ನು ಸಂಶೋಧನೆ ಮಾಡ ಬೇಕಾಗುತ್ತೆ, ಅವರಿಂದ ವರದಿ ಬಂದ ನಂತರ ಮುಂದೆ ಕ್ರಮ ಏನು ತೆಗೆದುಕೊಳ್ಳ ಬೇಕು ನಿರ್ಧರಿಸುತ್ತವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.

ಒಟ್ಟಾರೆ , ಹೃದಯಾಘಾತಗಳು‌, ಕ್ಯಾನ್ಸರ್ ರೋಗಗಳು ಹೆಚ್ಚು ಆಗುತ್ತಿರೋದನ್ನು ನೋಡ್ತಾ ಇದ್ದೀವಿ, ಅದರಲ್ಲೂ ಚಿಕ್ಕ ವಯಸ್ಸಿನಲ್ಲೇ ಹೆಚ್ಚಾಗಿ ಬರ್ತಾ ಇರೋದು ಹೆಚ್ಚಾಗಿ ಕಾಣ್ತಾ ಇದೆ. ಅದು ಬೇರೆ ಬೇರೆ ಕಾರಣಗಳು ಇರಬಹುದು. ನಮ್ಮ ಜೀವನ ಶೈಲಿ, ಆಹಾರ ಪದ್ದತಿ, ಮತ್ತು ಒತ್ತಡದ ಜೀವನ ಎಲ್ಲವೂ ಇದಕ್ಕೆ ಕಾರಣ ಆಗ್ತಾ ಇದೆ. ಹಾಗಾಗಿ ನಾವು ಸಾರ್ವಜನಿಕರಲ್ಲಿ ಆಹಾರ ಕ್ರಮದ ಬಗ್ಗೆ ಜಾಗೃತಿ ಮೂಡಿಸಬೇಕು. ಅಲ್ಲದೆ ಪ್ರೋಸಸ್ ಫುಡ್, ಬೇರೆ ಬೇರೆ ತರ ಹೆಚ್ಚು ಉಪ್ಪು, ಸಕ್ಕರೆ ಇರುವ ಆಹಾರ ಉಪಯೋಗಿಸಿದ್ರೆ ದುಷ್ಪರಿಣಾಮ ಆಗುತ್ತೆ ಅನ್ನೋದನ್ನ ಜಾಗೃತಿ ಮೂಡಿಸ ಬೇಕಿದೆ ಎಂದರು.

ನಮ್ಮ ಕರ್ನಾಟಕದಲ್ಲಷ್ಟೆ ಅಲ್ಲ ವಿಶ್ವ ಮಟ್ಟದಲ್ಲಿ ಆಗಿರುವ ಸಮಸ್ಯೆ, ಆಗ್ತಿದೆ. ಆದ್ರೇ, ಹಾಸನಲ್ಲಿ ಆಗಿರುವ ವಿಚಾರನೇ ಬೇರೆ, ವರದಿ ಇಲ್ದೆ ಗೊಂದಲ ಸೃಷ್ಟಿ ಮಾಡೋದಕ್ಕೆ ನಾನು ಹೋಗೋದಿಲ್ಲ. ಯಾರ ಹೃದಯಾಘಾತ ಯಾವ ಕಾರಣಕ್ಕೆ ಆಯ್ತು? ಇದಕ್ಕೇನಾದ್ರು ಬೇರೆ ವೈದ್ಯಕೀಯ ಕಾರಣಗಳು ಇದ್ಯಾ? ಅದನ್ನು ಹೊರತು ಪಡಿಸಿ ಹಾಸನದಲ್ಲಿ ನಡೆದಿರುವ ಹೃದಯಾಘಾತಗಳಿಗೆ ಬೇರೆ ಕಾಮಾನ್ ಲಿಂಕ್ ಇದ್ಯಾ? ಹಾಸನದಲ್ಲೇ ಹೆಚ್ಚಾಗುತ್ತಿದೆ ಅನಿಸಿದಾಗ ಇದಕ್ಕೇನಾದ್ರು ಬೇರೆ ಕಾರಣ ಇದ್ಯಾ ಅನ್ನೊದನ್ನು ಸಹ ನೋಡ ಬೇಕಾಗುತ್ತೆ, ವರದಿ ನೋಡಿದ ಮೇಲಷ್ಟೇ ನಾನು ಮಾತನಾಡ ಬಹುದೋ ಹೊರತು ಮೊದಲೇ ಏನು ಹೇಳೋದಕ್ಕೆ ಆಗಲ್ಲ ಎಂದು ಸಚಿವ ಗುಂಡುರಾವ್ ತಿಳಿಸಿದರು.

ಇದನ್ನೂ ಓದಿ: Kodagu: ನಗರ ಪ್ರದೇಶದ ವಸತಿ ಮತ್ತು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನ!