Heart Attack: ಹೃದಯಾಘಾತ ಪ್ರಕರಣ – ಜಯದೇವ ಆಸ್ಪತ್ರೆಯಲ್ಲಿ ಚೆಕಪ್‌ಗೆ ಜನವೋ ಜನ –ಹೃದಯಾಘಾತ ತಡೆಯಲು ಆರೋಗ್ಯ ಇಲಾಖೆಯಿಂದ ಪ್ಲಾನ್

Heart Attack: ರಾಜ್ಯದಲ್ಲಿ ಕೊರೋನಾಗಿಂತ ಹೆಚ್ಚಿನ ಭಯವನ್ನು ಹುಟ್ಟಿಸಿದೆ ಹೃದಾಯಾಘಾತ. ಕೊರೋನ ಆದರೆ ಸಾಯುವ ಭಯವಿಲ್ಲ. ಜ್ವರ, ಮೈ ಕೈ ನೋಡವು ಶೀತದಿಂದ ಬಳಲಿ ನಂತರ ಹತ್ತು- ಹದಿನೈದು ದಿನದಲ್ಲಿ ಎಚ್ಚೆತ್ತುಕೊಳ್ಳುವ ಭರವಸೆಯಿದೆ. ಆದರೆ ಈ ಹೃದಯಾಘಾತ ಒಂದೇ ನಿಮಿಷಕ್ಕೆ ಮರಣಕ್ಕೆ ದೂಡಿರುತ್ತದೆ. ಇದರಿಂದ ಬೇಸತ್ತ ಜನ ಭಯದಿಂದ ಆಸ್ಪತ್ರೆಯತ್ತ ಓಡುತ್ತಿದ್ದಾರೆ, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚೆಕಪ್ ಗೆ ಜನವೋ ಜನ.
ಜಯದೇವದ ಓಪಿಡಿಯಲ್ಲಿ ಇಂದು ಬೆಳಿಗ್ಗೆಯಿಂದಲೆ ರೊಟಿನ್ ಚೆಕಪ್ ಗೆ ನೂಕುನುಗ್ಗಲು ಉಂಟಾಗಿದೆ. ದಿನನಿತ್ಯ ಚೆಕಪ್ ಗೆ 1200 ರಿಂದ 1300 ರಷ್ಟು ಹೃದ್ರೋಗಿಗಳು ಆಸ್ಪತ್ರೆಗೆ ಬರ್ತಿದ್ದಾರೆ. ಆದ್ರೆ ಹೃದಯಾಘಾತ ಪ್ರಕರಣ ಹೆಚ್ಚಾದಗಿಂದ ಚೆಕಪ್ ಗೆ ಬರ್ತಿರುವ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಇಂದು ಜಯದೇವ ಆಸ್ಪತ್ರೆ ಓಪಿಡಿಯಲ್ಲಿ ಬೆಳಿಗ್ಗೆಯಿಂದಲೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳ ಆಗಮಿಸುತ್ತಿದ್ದಾರೆ. ಗಾಬರಿಯಿಂದಲೇ ಚೆಕಪ್ ಮಾಡಿಸಿಕೊಳ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಈ ಮಧ್ಯೆ ರಾಜ್ಯದಲ್ಲಿ ಹೃದಯಘಾತ ರಣಕೇಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿಲ್ಲರ್ ಹೃದಯಘಾತಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆಯಿಂದ ಪ್ಲಾನ್ ಮಾಡಿದೆ. ಹಾರ್ಟ್ ಅಟ್ಯಾಕ್ ಡೆತ್ ಕಂಟ್ರೋಲ್ಗೆ ದೇಶದಲ್ಲಿಯೇ ಮಾದರಿಯ ಹೆಜ್ಜೆಯಲ್ಲಿ ಆರೋಗ್ಯ ಇಲಾಖೆ ಇಟ್ಟಿದೆ. ರಾಜ್ಯದ ಜನರಿಗೆ 100% ಪ್ರಥಮ ಚಿಕಿತ್ಸೆ (CPR) ತರಬೇತಿ ನೀಡುವ ಯೋಜನೆಯನ್ನು ಆರೋಗ್ಯ ಇಲಾಖೆ ಕೈಗೆತ್ತಿಕೊಂಡಿದೆ.
ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗ್ತಿರುವ ಯವ ಜನತೆ ಸಂಖ್ಯೆ ದಿದಿಂದ ದಿನಕ್ಕೆ ಏರುತ್ತಲೇ ಇದೆ. ಈ ಹಿನ್ನಲೆ ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಐಟಿ ಉದ್ಯೋಗಿಗಳು, ಸರ್ಕಾರಿ ಉದ್ಯೋಗಿಗಳು, ಪೊಲೀಸ್ ಇಲಾಖೆ, ಬಸ್ ಚಾಲಕರು, ಸೇರಿದಂತೆ ರಾಜ್ಯದ ಜನರಿಗೆ 100% ಎಲ್ಲರಿಗೂ CPR ತರಬೇತಿ ನೀಡಲು ಆರೋಗ್ಯ ಇಲಾಖೆ ಪ್ಲಾನ್ ಮಾಡಿದೆ.
CPR ಅಂದರೇನು?
ಸಿಪಿಆರ್ ಅನ್ನೋದು ಹೃದಯಾಘಾಥ ಆದಾಘ ನೀಡುವ ಪ್ರಮಥಮ ಚಿಕಿತ್ಸೆ. ಹೃದಯ ಸ್ತಂಭನದ ಸಮಯದಲ್ಲಿ ಹೃದಯ ಬಡಿತ ನಿಲ್ಲುವಾಗ ಅಥವಾ ಮೆದುಳಿಗೆ ಮತ್ತು ಇತರ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆ ಮಾಡಲು ತುಂಬಾ ನಿಷ್ಪರಿಣಾಮಕಾರಿಯಾಗಿ ಬಡಿಯುವಾಗ, CPR ಅಥವಾ ಹೃದಯ ಶ್ವಾಸಕೋಶದ ಪುನರುಜ್ಜೀವನವು ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ . ಆದಾಗ್ಯೂ, ತರಬೇತಿಯ ನಂತರವೂ, CPR ಹಂತಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಒಂದು ಸವಾಲಾಗಿರಬಹುದು.
ನೀವು ಎಷ್ಟು ಕಂಪ್ರೆಷನ್‌ಗಳನ್ನು ಮಾಡಬೇಕು ಮತ್ತು ಎಷ್ಟು ವೇಗವಾಗಿ ಮಾಡಬೇಕು? ಎದೆಯನ್ನು ಎಷ್ಟು ಆಳವಾಗಿ ಸಂಕುಚಿತಗೊಳಿಸಬೇಕು? ನೀವು ಎಷ್ಟು ಬಾರಿ ಪಾರುಗಾಣಿಕಾ ಉಸಿರನ್ನು ನೀಡಬೇಕು? ಸಮಯ ಬಂದಾಗ ನೀವು ಉತ್ತಮ ಗುಣಮಟ್ಟದ CPR ಅನ್ನು ನಿರ್ವಹಿಸಬಹುದೆಂದು ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ತರಬೇತಿ ನೀಡಲು ಅರೋಗ್ಯ ಇಲಾಖೆ ತಯಾರಿ ನಡೆಸಿದೆ.
ಇದನ್ನೂ ಓದಿ: MP: ಆಸ್ಪತ್ರೆಗೆ ನುಗ್ಗಿ, ಎದೆ ಮೇಲೆ ಕೂತು ಯುವತಿಯ ಕತ್ತು ಸೀಳಿದ ದುಷ್ಟ- ಸುಮ್ಮನೇ ನೋಡುತ್ತಾ ನಿಂತ ಜನ!
Comments are closed.