Indian Railway: ಜುಲೈ 1 ರಿಂದ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್ ಚಾರ್ಟ್ ಬಿಡುಗಡೆ : ಭಾರತೀಯ ರೈಲ್ವೆ ಇಲಾಖೆ

Share the Article

Indian Railway: ಪ್ರಸ್ತುತ 4 ಗಂಟೆಯ ಮೊದಲು ರಿಸರ್ವೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು ಆದರೆ ಜುಲೈ 1 ರಿಂದ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್‌ ಚಾರ್ಟ್ ಬಿಡುಗಡೆ ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೇ( Indian Railway) ಇಲಾಖೆ ತಿಳಿಸಿದೆ.

ಜುಲೈ 1 ರಿಂದ 2025 ರಿಂದ ಐಆರ್‌ಸಿಟಿಸಿ ವೆಬ್‌ಸೈಟ್‌ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದ್ದು ತಾತ್ಕಾಲ್ ಬುಕ್ಕಿಂಗ್‌ಗಳಿಗಾಗಿ ಒಟಿಪಿ ಆಧಾರಿತ ದೃಢೀಕರಣದ ಅನುಷ್ಠಾನವು ಜುಲೈ ಕೊನೆಯಿಂದ ಆರಂಭವಾಗಲಿದೆ. ಬಳಕೆದಾರರು ಆಧಾರ್ ಅಥವಾ ತಮ್ಮ ಡಿಜಿಲಾಕರ್ ಖಾತೆಗಳಲ್ಲಿ ಸಂಗ್ರಹವಾಗಿರುವ ಇತರ ಮಾನ್ಯಸರ್ಕಾರಿ ಗುರುತಿನ ದಾಖಲೆಗಳನ್ನು ಬಳಸಿಕೊಂಡು ತಮ್ಮ ಗುರುತನ್ನು ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ವೇಟಿಂಗ್ ಲಿಸ್ಟ್‌ನಲ್ಲಿದ್ದ ಪ್ರಯಾಣಿಕರಿಗೆ ಟಿಕೆಟ್ ಸಿಗದೇ ಇದ್ದರೆ ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಲು ಸಮಯ ಸಿಗಲಿದೆ.

ಇದನ್ನೂ ಓದಿ:Banu Mushtaq: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ

Comments are closed.