Bengaluru: ಚೀಟಿ ನೆಪದಲ್ಲಿ 40ಕ್ಕೂ ಹೆಚ್ಚು ಮಂದಿಗೆ ಯಾಮಾರಿಸಿ ಪರಾರಿ

Bengaluru: ಚೀಟಿ ಹೆಸರಿನಲ್ಲಿ 40 ಕ್ಕೂ ಹೆಚ್ಚು ಮಂದಿಗೆ ಲಕ್ಷ ಲಕ್ಷ ಯಾಮಾರಿಸಿರುವ ಘಟನೆ ಬೆಂಗಳೂರಿನ ದೇವರ ಚಿಕ್ಕನಹಳ್ಳಿಯ ಶ್ರೀನಿವಾಸ ಅಲ್ಲಿ ಲೇಔಟ್ನಲ್ಲಿ ನಡೆದಿದೆ.

ಪಾಂಡುರಂಗ ಎಂಬ ವ್ಯಕ್ತಿ ಜನರಿಂದ ಹಣ ಕಟ್ಟಿಸಿಕೊಂಡು ನಾಮ ಹಾಕಿ ಪರಾರಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದ ಈ ವ್ಯಕ್ತಿ, ತನ್ನ ಮನೆಯನ್ನು ಭೋಗ್ಯಕ್ಕೂ ಕೊಟ್ಟಿದ್ದು ತನ್ನ ಮನೆಯ ಮೇಲೆ ಸಾಲವನ್ನು ಪಡೆದಿರುತ್ತಾರೆ. ಇದೀಗ ರಾತ್ರೋರಾತ್ರಿ ಮನೆ ಖಾಲಿ ಮಾಡಿ ಹೊರಟಿದ್ದು, ಪೊಲೀಸರ ಸಹಾಯದಿಂದ ಬ್ಯಾಂಕಿನವರು ಭೋಗ್ಯದ ಮನೆಯನ್ನು ಖಾಲಿ ಮಾಡಿಸಿರುತ್ತಾರೆ.
ತಮಿಳುನಾಡಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದು, ಮಕ್ಕಳ ವಿದ್ಯಾಭ್ಯಾಸ ಮದುವೆ ಗೆಂದು ಕೂಡಿಟ್ಟಿದ್ದ ಎಷ್ಟು ಜನರ ಹಣ ನೀರು ಪಾಲಾಗಿದೆ. ಇದೀಗ ತಮಗೆ ನ್ಯಾಯ ಕೊಡಿಸಿ ಎಂದು ಜನರು ಪೊಲೀಸರ ಬಳಿ ಮನವಿ ಮಾಡಿದ್ದಾರೆ.
Comments are closed.