Udupi: ಬ್ರಹ್ಮಾವರ: ಕುಂಜಾಲು ಸಮೀಪ ದನದ ರುಂಡ ಪತ್ತೆ!

Share the Article

Udupi: ಉಡುಪಿ ತಾಲ್ಲೂಕಿನ ಕುಂಜಾಲು ಬಸ್ ನಿಲ್ದಾಣದ ಸಮೀಪ ದುಷ್ಕರ್ಮಿಗಳು ದನದ ರುಂಡ ಎಸೆದಿದ್ದಾರೆ. ಶನಿವಾರ ತಡ ರಾತ್ರಿ ಈ ಘಟನೆ ಸಂಭವಿಸಿದ್ದು , ದನದ ತಲೆಯನ್ನು ದುಷ್ಕರ್ಮಿಗಳು ರಸ್ತೆಯಲ್ಲೇ ಎಸೆದು ಹೋಗಿದ್ದಾರೆ. ಪ್ರಕರಣದ ಬಗ್ಗೆ ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ಘಟಕವು ದುಷ್ಕರ್ಮಿಗಳ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರಿಗೆ ದೂರು ನೀಡಿದ ನಿಯೋಗದಲ್ಲಿ ಘಟಕದ ಅಧ್ಯಕ್ಷ ಪ್ರದೀಪ್, ದೀಪು ಚಾಂತಾರ್, ಪ್ರಧಾನ ಕಾರ್ಯದರ್ಶಿ ಶರತ್ ರಾಜ್ ಆರೂರು, ಉಪಾಧ್ಯಕ್ಷರು ಸುದೇಶ್ ಶೆಟ್ಟಿ ಹೇರೂರು, ಕೋಶಾಧಿಕಾರಿ ನಿತಿನ್ ಶೆಟ್ಟಿ ಪೇತ್ರಿ ಹಾಗೂ ಸರ್ವ ಸದಸ್ಯರು ಉಪಸ್ತಿತರಿದ್ದರು.

ಇದನ್ನೂ ಓದಿ;Death: ಚಿಕ್ಕಮಗಳೂರು: ಕೊಪ್ಪ ಮೊರಾರ್ಜಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Comments are closed.