Bengaluru: ಕಾಡು ಪ್ರಾಣಿಗಳನ್ನು ಬೇಟೆಯಾಡಿದವರ ಬಂಧನ

Bengaluru: ಬನ್ನೇರುಗಟ್ಟದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಜಿಂಕೆ ಹಾಗೂ ಕಾಡು ಹಂದಿಗಳನ್ನು ಬೇಟೆಯಾಡುತ್ತಿದ್ದ ಜಾಲ ಒಂದನ್ನು ಅರಣ್ಯ ಅಧಿಕಾರಿಗಳು ಹುಡುಕಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಾಣಿಗಳ ಮಾಂಸಕ್ಕಾಗಿ ಅವುಗಳನ್ನು ಬೇಟೆಯಾಡುತ್ತಿದ್ದು, 4 ಜಿಂಕೆ ಹಾಗೂ ಮತ್ತು 1 ಕಾಡು ಹಂದಿ ಮತ್ತು 74 ಕೆಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸುತ್ತಿದ್ದ 2 ಬಂದೂಕು, 2 ಕಾರು, ಬೈಕ್’ನ್ನು ಜಪ್ತಿ ಮಾಡಿದ್ದಾರೆ.
ವನ್ಯಜೀವಿ ಮಾಂಸ ವ್ಯಾಪಾರಕ್ಕಾಗಿ ಆರೋಪಿಗಳು ಒಂಬತ್ತು ಜಿಂಕೆ ಮತ್ತು ಒಂದು ಕಾಡುಹಂದಿಯನ್ನು ಕೊಂದಿದ್ದು, ಸುಳಿವಿನ ಆಧಾರದ ಮೇಲೆ ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದ ತಂಡವು ಕಗ್ಗಲಿಪುರ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಶನಿವಾರ ತಡರಾತ್ರಿ ಬನ್ನೇರುಘಟ್ಟ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಬಳಿ ಎರಡು ಕಾರುಗಳನ್ನು ತಡೆಹಿಡಿದು. ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮೂವರು ಶಂಕಿತರು ಪರಾರಿಯಾಗಿದ್ದು, ಓರ್ವ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರತಾಪ್ (31) ಎಂದು ಗುರ್ತಿಸಲಾಗಿದೆ.
Comments are closed.