KPCC: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಸಾಮಾಜಿಕ ಜಲಾತಾಣ ವಿಭಾಗಕ್ಕೆ ಹೊಸ ಅಧ್ಯಕ್ಷರಾಗಿ ಐಶ್ವರ್ಯ ಮಹಾದೇವ್ ನೇಮಕ

KPCC: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಸಾಮಾಜಿಕ ಜಲಾತಾಣ ವಿಭಾಗಕ್ಕೆ ಹೊಸ ಅಧ್ಯಕ್ಷರಾಗಿ ಐಶ್ವರ್ಯ ಮಹಾದೇವ್ ಅವರ ನೇಮಕವಾಗಿದೆ. ಸಿಎಂ ಹಾಗೂ ಡಿಸಿಎಂ ಆಪ್ತ ಮುಖಂಡ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರ ಮಗಳೇ ಐಶ್ವರ್ಯ ಮಹಾದೇವ್.

ಐಶ್ವರ್ಯ ಮಹಾದೇವ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿದೆ. ಕಾರ್ಯದರ್ಶೀಯಾದ ಕೆ.ಸಿ.ವೇಣುಗೋಪಾಲ್ ಅವರು ಐಶ್ವರ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ.
ಐಶ್ವರ್ಯ ಮಹದೇವ್ ಅವರು ಕ್ಷೇತ್ರ ಹಾಗೂ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರದ ನಿವಾಸಿಯಾಗಿರುವ ಐಶ್ವರ್ಯ ಮಹದೇವ್ ಅತಿ ಕಿರಿಯ ವಯಸ್ಸಿನಲ್ಲಿಯೇ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಕೂಡಾ ಆಗಿದ್ದರು. ಇವರು ವಕೀಲ ಪದವೀಧರೆ.
ಇದನ್ನೂ ಓದಿ: Accident: ಕಲ್ಲುಗುಂಡಿಯಲ್ಲಿ ಗುಡ್ಡಕ್ಕೆ ಗುದ್ದಿದ KSRTC ಬಸ್ !
Comments are closed.