Mobile ID: ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ!ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್​ಫಾರ್ಮ್?

Share the Article

Mobile ID: ಸೈಬರ್ ವಂಚನೆಗೆ ಕಡಿವಾಣ ಹಾಕಲು ಟೆಲಿಕಾಂ ಇಲಾಖೆ ಬಿಗಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಅದರಂತೆ, ಗ್ರಾಹಕರ ಮೊಬೈಲ್ ನಂಬರ್ ಅಥವಾ ಗುರುತುಗಳನ್ನು ಪರಿಶೀಲಿಸಬಹುದಾದಂತಹ ಕೇಂದ್ರೀಕೃತ ಪ್ಲಾಟ್​​ಫಾರ್ಮ್​​ವೊಂದನ್ನು ರಚಿಸಲು ಮುಂದಾಗಿದೆ.

ಟೆಲಿಕಾಂ ಆಪರೇಟರ್​​ಗಳು, ಬ್ಯಾಂಕುಗಳು, ಇಕಾಮರ್ಸ್ ಸಂಸ್ಥೆಗಳು ಮೊದಲಾದವು ಈಗ ಈ ಪ್ಲಾಟ್​​ಫಾರ್ಮ್ ಮೂಲಕ ತಮ್ಮ ಗ್ರಾಹಕರ ಗುರುತುಗಳನ್ನು ಪರಿಶೀಲಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ 2024ರ ದೂರಸಂಪರ್ಕ ಟೆಲಿಕಾಂ ಸೈಬರ್ ಭದ್ರತೆ ನಿಯಮಗಳಿಗೆ ತಿದ್ದುಪಡಿ ತರಲು ರೂಪಿಸಲಾದ ಕರಡು ಅಧಿಸೂಚನೆಯಲ್ಲಿ ಇಂಥದ್ದೊಂದು ಪ್ರಸ್ತಾಪ ಮಾಡಲಾಗಿದೆ.

ಇದು ಮೊಬೈಲ್ ನಂಬರ್ ವ್ಯಾಲಿಡೇಶನ್ (ಎಂಎನ್​​ವಿ) ಪ್ಲಾಟ್​​ಫಾರ್ಮ್ ಆಗಿದ್ದು, ಕೇಂದ್ರ ಸರ್ಕಾರವೇ ಖುದ್ದಾಗಿ ಇದನ್ನು ಸ್ಥಾಪಿಸಬಹುದು. ಅಥವಾ ಏಜೆನ್ಸಿಯೊಂದಕ್ಕೆ ಇದರ ಜವಾಬ್ದಾರಿ ವಹಿಸಬಹುದು. ಈ ಪ್ಲಾಟ್​​ಫಾರ್ಮ್ ಅನ್ನು ವೆರಿಫಿಕೇಶನ್​​ಗೆ ಬಳಸಲು ನಿರ್ದಿಷ್ಟ ಶುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:India book of record: ಕೊಡಗಿನ ಪುಟಾಣಿ ಮಾಶಿತಾಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವಾರ್ಡ್!

Comments are closed.