Home Crime Shivamogga: ಮದುವೆ ಆಗದೇ ಗರ್ಭಣಿಯಾದ ಮಗಳನ್ನು ಕಾಡಿಗೆ ಕರೆದುಕೊಂಡು ಹೋದ ತಂದೆ, ಕತ್ತು ಹಿಸುಕಿ ಕೊಲೆ...

Shivamogga: ಮದುವೆ ಆಗದೇ ಗರ್ಭಣಿಯಾದ ಮಗಳನ್ನು ಕಾಡಿಗೆ ಕರೆದುಕೊಂಡು ಹೋದ ತಂದೆ, ಕತ್ತು ಹಿಸುಕಿ ಕೊಲೆ ಯತ್ನ!

Hindu neighbor gifts plot of land

Hindu neighbour gifts land to Muslim journalist

Shivamogga: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಉಳವಿ ಗ್ರಾಮದಲ್ಲಿ ತಂದೆಯೊಬ್ಬರು ಮದುವೆಯಾಗದೇ ಗರ್ಭಿಣಿಯಾದ ಮಗಳನ್ನು ಕಾಡಿಗೆ ಕರೆದೊಯ್ದು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ ಗಂಭೀರ ಘಟನೆ ನಡೆದಿದೆ.

ಮಗಳು ಕುತ್ತಿಗೆ ಹಿಸುಕಿದಾಗ ಮಗಳು ಪ್ರಜ್ಞೆ ತಪ್ಪಿದಾಗ ಸತ್ತಿದ್ದಾಳೆಂದು ಕಾಡಿನಲ್ಲಿ ಬಿಟ್ಟು ಬಂದಾಗ ನಂತರ ಪ್ರಜ್ಞೆ ಬಂದು ರಸ್ತೆಗೆ ಹೇಗೋ ನಡೆದುಕೊಂಡು ಬಂದಿದ್ದು, ಜನರಲ್ಲಿ ಬೇಡಿ, ಪ್ರಾಣ ಉಳಿಸಿದ್ದಾರೆ.

ಧರ್ಮಾನಾಯ್ಕ ಎಂಬಾತನ ಮಗಳು ಮದುವೆಯಾಗದಿದ್ದರೂ ಮಗಳು ಗರ್ಭಿಣಿ ಆಗಿದ್ದಳು. ಮಗಳು ತುಂಬು ಗರ್ಭಿಣಿಯಾಗಿದ್ದು, ಊರಿನವರಿಗೆ ವಿಷಯ ತಿಳಿದು ಮರ್ಯಾದೆ ಹೋಗಿತ್ತು. ಇನ್ನು ಊರಿನಲ್ಲಿ ಇರಲು ಆಗಲ್ಲ ಎಂದು, ಜನರ ಚುಚ್ಚು ಮಾತುಗಳನ್ನು ಕೇಳಿ ಮನನೊಂದು ಧರ್ಮಾನಾಯ್ಕ ಇಂತಹ ಮಗಳು ಇದ್ದರೆಷ್ಟು, ಹೋದರೆಷ್ಟು ಕೊಲೆ ಮಾಡುವ ಯೋಚನೆ ಮಾಡಿದ್ದಾನೆ.

ಪತ್ನಿ, ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದು, ತಮ್ಮ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲು ಮುಂದಾಗಿದ್ದಾನೆ. ಆಗ ಪತ್ನಿ ಮಗಳನ್ನು ಬಿಟ್ಟು ಬಿಡಿ ಎಂದು ಪತಿ ಕಾಲಿಗೆ ಬಿದ್ದು ಬೇಡಿದ್ದು, ಮನಸ್ಸು ಕರಗದೇ ಕೊಲೆ ಮಾಡಲು ಯತ್ನ ಮಾಡಿದ್ದಾನೆ. ಮಗಳು ಪ್ರಜ್ಞೆ ತಪ್ಪಿದ್ದು, ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಅಲ್ಲಿಂದ ಇಬ್ಬರು ಹೋಗಿದ್ದಾರೆ.

ಮಗಳಿಗೆ ಪ್ರಜ್ಞೆ ಬಂದಿದ್ದು, ದಾರಿಹೋಕರ ಸಹಾಯದಿಂದ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾಳೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೊರಬ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಶಿರಾಳಕೊಪ್ಪ ಸಮೀಪದ ಮಳವಳ್ಳಿ ತಾಂಡಾದ ನಿವಾಸಿ ಧರ್ಮನಾಯ್ಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:Shivamogga: ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು