Tiger Death: ವ್ಯಾಘ್ರಗಳ ಸಾವು ಪ್ರಕರಣ: ಇಬ್ಬರ ಬಂಧನ, ವಿಚಾರಣೆ ವೇಳೆ ಸತ್ಯ ಬಯಲು

Share the Article

Tiger Death: ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಖಚಿತವಾಗಿದೆ. ಆದರೆ ಈ ವಿಷ ಇಟ್ಟವರು ಯಾರು ಎನ್ನುವುದು ಇದೀಗ ಬಯಲಾಗಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಟಿವಿ9 ವರದಿ ಮಾಡಿದೆ.

ಮಾದ ಅಲಿಯಾಸ್‌ ಮಾದುರಾಜು ಹಾಗೂ ನಾಗರಾಜ್‌ ಬಂಧಿತ ವ್ಯಕ್ತಿಗಳು. ಅರಣ್ಯ ಸಿಬ್ಬಂದಿಗಳು, ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ. ಮಾದ ಅಲಿಯಾಸ್‌ ಮಾದುರಾಜುಗೆ ಸೇರಿದ್ದ ಕೆಂಚಿ ಎನ್ನುವ ಹಸುವನ್ನು ಹುಲಿ ತಿಂದಿತ್ತು. ಇದನ್ನು ನಾಗರಾಜ್‌ನ ಬಳಿ ಮಾದ ಹೇಳಿ ಕಣ್ಣೀರಿಟ್ಟಿದ್ದ. ನಂತರ ಹಸು ಕೊಂದ ಹುಲಿ ಕೊಲ್ಲಲು ಇಬ್ಬರು ನಿರ್ಧಾರ ಮಾಡಿದ್ದರು. ಇದಕ್ಕಾಗಿ ಕ್ರಿಮಿನಾಶಕ ತಂದಿದ್ದರು.

ನಾಗರಾಜ್‌ ಮೃತ ಹಸುವಿಗೆ ಕ್ರಿಮಿನಾಶಕ ಹಾಕಿ ಬಂದಿದ್ದ. ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದ ಹುಲಿ ಮರಿಗಳು ಸತ್ತಿದೆ. ಇದನ್ನು ಕಂಡು ಮಾದುರಾಜು ಖುಷಿಪಟ್ಟಿದ್ದ. ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಮಾದ ಅಲಿಯಾಸ್‌ ಮಾದುರಾಜು ಪರಾರಿಯಾಗಿದ್ದ. ಮಾದ ಆರೋಪಿ ಎಂಬುವುದು ದೃಢವಾಗಿದ್ದು, ಹಸು ಕೊಂದಿದ್ದಕ್ಕೆ ವಿಷ ಹಾಕಿರುವುದಾಗಿ ಮಾದ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಆದರೆ ತಂದೆ ಶಿವಣ್ಣ ತನ್ನ ಮಗ ಮಾದನನ್ನು ಬಚಾವ್‌ ಮಾಡಲು ನಾನೇ ವಿಷ ಹಾಕಿರುವುದಾಗಿ ಹೇಳಿದ್ದರು. ಈಗ ತಂದೆ ಶಿವಣ್ಣನನ್ನು ಪ್ರಕರಣದಿಂದ ಕೈ ಬಿಡಲಾಗಿದೆ.

ಇದನ್ನೂ ಓದಿ: Puri: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ – 600 ಮಂದಿ ಅಸ್ವಸ್ಥ, 40 ಜನರ ಸ್ಥಿತಿ ಗಂಭೀರ!!

Comments are closed.