Weather Report: ಜುಲೈ ಮೊದಲ ವಾರ ಮಳೆ ಕೊರತೆ: ಹವಾಮಾನ ಇಲಾಖೆ ಮುನ್ಸೂಚನೆ

Share the Article

Weather Report: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸ್ವಲ್ಪ ಕಡಿಮೆ ಆಗಬಹುದು. ಮಳೆಗಳ ನಡುವಿನ ಅಂತರ ಜಾಸ್ತಿಯಾಗಬಹುದು. ಆದರೆ ಮಳೆ ಪೂರ್ತಿ ಕಡಿಮೆಯಾಗುವುದಿಲ್ಲ. ಕಾಸರಗೋಡು, ದ.ಕ., ಉಡುಪಿ, ಉ.ಕ. ಜಿಲ್ಲೆಗಳಲ್ಲಿ ಆಗಾಗ ಗುಡುಗು ಸಹಿತ ಸಾಧಾರಣ ಮಳೆ ಮುಂದುವರೆಯಬಹುದು. ಜೂನ್ 30, ಜುಲೈ 1 ರವರೆಗೆ ಮಳೆ ಕಡಿಮೆ ಆದರೂ ಮತ್ತೆ ಜುಲೈ 2-3ರಂದು ಮಳೆ ಜಾಸ್ತಿ ಆಗುವ ಮುನ್ಸೂಚನೆ ಇದೆ. ಜುಲೈ 5 ರಿಂದ ಮಳೆ ಬಹುತೇಕ ಕಡಿಮೆ ಆಗಿ ನಂತರ ಉತ್ತಮ ಬಿಸಿಲು ಬರುವ ಸಾಧ್ಯತೆಯೂ ಇದೆ.

ಮಲೆನಾಡಿನಲ್ಲಿ ಕಳೆದ 2-3 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಇಂದು ಸಾಧಾರಣ ಮಳೆ ಮುಂದುವರೆಯಬಹುದು. ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆಯಾಗಬಹುದು. ಮಲೆನಾಡಿನಲ್ಲಿ ಸಾಮಾನ್ಯ ಮಳೆ ಇನ್ನೂ ಒಂದು ವಾರ ಮುಂದುವರೆಯಬಹುದು.

ದಕ್ಷಿಣ ಒಳನಾಡಿನಲ್ಲಿ ಇವತ್ತು ಮಳೆ ಕಡಿಮೆಯಾಗುವ ಮುನ್ಸೂಚನೆ ಇದೆ. ಎಲ್ಲಾ ಜಿಲ್ಲೆಗಳಲ್ಲಿ ಭಾಗಷಃ ಮೋಡದ ವಾತಾವರಣ ಇರಲಿದ್ದು ಚಾಮರಾಜನಗರ, ಮೈಸೂರು, ಮಂಡ್ಯ ಬೆಂಗಳೂರು-ಗ್ರಾಮಾಂತರ, ಕೋಲಾರ, ದಾವಣಗೆರೆ ಜಿಲ್ಲೆಗಳ ಕೆಲವೆಡೆ ತುಂತುರು ಮಳೆ ಮುನ್ಸೂಚನೆ ಇದೆ. ಒಳನಾಡು ಜಿಲ್ಲೆಗಳಲ್ಲಿ ಜುಲೈ ಆರಂಭದಲ್ಲಿಯೂ ಮಳೆ ಕೊರತೆ ಮುಂದುವರೆಯುವ ಮುನ್ಸೂಚನೆ ಇದೆ.

ಬಂಗಾಳಕೊಲ್ಲಿಯ ಪ.ಬಂಗಾಳ ಸಮೀಪ ಗಾಳಿಯ ತಿರುಗುವಿಕೆ ಒಂದು ಸಲ ಶಿಥಿಲ ಆದರೂ ಜೂನ್ 30 ರಿಂದ ಮತ್ತೆ ಅಪ್ಪರ್ ಏರ್ ಸರ್ಕ್ಯುಲೇಷನ್ ಉಂಟಾಗುವ ಮುನ್ಸೂಚನೆ ಇರುವುದರಿಂದ ಇನ್ನೂ ಒಂದು ವಾರ ಮೋಡ ಬಿಸಿಲಿನ ಜೊತೆಗೆ ಪ್ರತಿದಿನ ಒಂದೆರಡು ಸಾಮಾನ್ಯ ಮಳೆ ಮುಂದುವರೆದು ಜುಲೈ 5ರ ನಂತರ ಮಳೆ ಕಡಿಮೆ ಆಗಬಹುದು. ಮುಂದಿನ ಒಂದು ವಾರ ಮಹಾರಾಷ್ಟ್ರ ಕರಾವಳಿ ಮತ್ತು ಉತ್ತರ ಭಾರತದಲ್ಲಿ ಮಳೆ ಮುಂದುವರೆಯಲಿದೆ.

ಇದನ್ನೂ ಓದಿ: Kodagu: ಕೊಡಗು ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆ – ನಾಡಗೀತೆಗೆ ಅವಮಾನ..!

Comments are closed.