Tigers Death: ವಿಷಪ್ರಾಶನದಿಂದ ಐದು ಹುಲಿಗಳ ಸಾವು – ಹುಲಿಗಳು ಪಂಚಭೂತಗಳಲ್ಲಿ ಲೀನ

Tigers Death: ವಿಷ ಪ್ರಾಶನದಿಂದ ಅಸುನೀಗಿದ ಹುಲಿ ಕುಟುಂಬದ ಕಳೆಬರಗಳನ್ನು ಎನ್‌ಟಿಸಿಎ ಮಾರ್ಗಸೂಚಿ ಅನ್ವಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮ್ಮುಖದಲ್ಲಿ ಅಂತ್ಯಕ್ತಿಯೆ ನಡೆಸಲಾಯ್ತು.

ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಮಣ್ಯಂ ಶಾಖೆಯ ಮಹದೇಶ್ವರ ದೇವಸ್ಥಾನ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ಹುಲಿ ಮತ್ತು ಹಸುವಿನ ಅಂಗಾಂಗಗLನ್ ವಿಧಿವಿಜ್ಞಾನ ಪ್ರಯೋಗ ಮಾಡಿ ಕಳೆಬರಹವನ್ನು ಅಂತ್ಯಕ್ರಿಯೆ ನಡೆಸಲಾಯಿತು. ಹುಲಿಗಳ ಮೃತ ದೇಹದ ಆಸುಪಾಸಲ್ಲೇ ಸಿಕ್ಕಿದ್ದ ಹಸುವಿನ ದೇಹವನ್ನು ಪ್ರತ್ಯೇಕವಾಗಿ ಸುಡಲಾಯಿತು.
ಮೃತಪಟ್ಟಿದ್ದ 5 ಹುಲಿಗಳಲ್ಲಿ ತಾಯಿ ಹುಲಿ ಸೇರಿದಂತೆ ನಾಲಕು ಹೆಣ್ಣು ಹುಲಿ, ಒಂದು ಗಂಡು ಹುಲಿಗಳಾಗಿದ್ದು, ಹುಲಿಗೆ 8 ರಿಂದ 10 ವರ್ಷ ಮತ್ತು ಮರಿಗಳಿಗೆ 8-10 ತಿಂಗಳು ವಯಸ್ಸಾಗಿರಬಹುದೆಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ.
ಹುಲಿಗಳು ಮೃತಪಟ್ಟು ಮೂರು ದಿನಗಳಾಗಿದ್ದು ಹಸುವಿನ ಮೃತ ದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಹಸುವಿನ ಮಾಂಸ ತಿಂದಿದ್ದ ಹುಲಿಗಳು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ.
ಈಗಾಗಲೇ ಹುಲಿ ಮತ್ತು ಹಸುವಿನ ಅಂಗಾಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು ಅಂತಿಮ ವರದಿ ಬಂದ ನಂತರ ಹುಲಿಗಳ ಸಾವಿಗೆ ಮತ್ತಷ್ಟು ನಿಖರ ಮಾಹಿತಿಗಳು ದೊರೆಯಲಿದೆ.
ಸಚಿವರ ಹಾರಿಕೆ ಉತ್ತರ
ಇನ್ನು ಮಾಧ್ಯಮದವರು ರಸ್ತೆಯಿಂದ ಸ್ವಲ್ಪ ದೂರದಲ್ಲಿ 5 ಹಾಲಿಗಳು ಮೃತಪಟ್ಟಿದ್ದರು. ನಿಮ್ಮ ಇಲಾಖೆ ಅಧಿಕಾರಿಗಳಿಗೆ ಮೂರು ದಿನಗಳ ನಂತರ ಗೊತ್ತಾಗಿದೆ ಈ ನಿರ್ಲಕ್ಷ್ಯಕ್ಕೆ ನಿಮ್ಮ ಅಧಿಕಾರಿಗಳ ನಿರ್ಲಕ್ಷವೇ ಕಾರಣ, ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ ಎಂಬ ಪ್ರಶ್ನೆಗೆ ಈಗಾಗಲೇ ಎಸಿಎಫ್ ನೇತತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ವರದಿ ಬಂದ ನಂತರ ಸೂಕ್ತ ಕ್ರಮ ವಹಿಸಲಾಗುವುದು ಎಂದರು. ಆದರೆ ಮಾಧ್ಯಮದವರು ಇಷ್ಟು ದೊಡ್ಡ ದುರಂತ ನಡೆದಿದ್ದರೂ ನಿಮ್ಮ ಇಲಾಖೆ ಅಧಿಕಾರಿಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಸಚಿವರು ಹಾರಿಕೆಯ ಉತ್ತರ ನೀಡಿ ಮರು ಮಾತನಾಡದೆ ಮುನ್ನಡೆದರು.
ದನಗಾಹಿಗಳು ವಶಕ್ಕೆ
ಹುಲಿ ಬೇಟೆಯಾಡಿದ್ದ ಹಸುವಿಗೆ ಕಿಮಿನಾಶಕ ಹಾಕಿರುವ ತಮಿಳುನಾಡು ಮೂಲದ ಓರ್ವ ಸೇರಿದಂತೆ ಒಟ್ಟು ಆರು ಮುಂದೆಯನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದೆ ಮೃತಪಟ್ಟಿರುವ ಹಸುವಿನ ಮಾಲೀಕ ಇನ್ನು ಯಾರೆಂಬುದು ಪತ್ತೆಯಾಗಿಲ್ಲ, ಪೊಲೀಸರು ಇದರ ಬೆನ್ನ ಹಿಂದೆ ಬಿದ್ದಿದ್ದು ಸಿಡಿಯರ್ ಮತ್ತು ಟವರ್ ಲೊಕೇಶನ್ ಆಧಾರದಲ್ಲಿ ವಿಷ ಹಾಕಿದವರ ಪತ್ತೆ ಮತ್ತು ಮಾಲೀಕನ ಪತ್ತೆಗೆ ಬಲೆ ಬೀಸಿದ್ದಾರೆ. 5 ಹುಲಿಗಳು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ರಿಣಿ ಎಸ್ಐಟಿ ವಿಶೇಷ ತಂಡದ ಸದಸ್ಯೆ ನೇತೃತ್ವದಲ್ಲಿ ತಮಿಳುನಾಡಿನ ತೇನ್ ಮುರಳಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Belthangady: ಬೆಳ್ತಂಗಡಿ: ನಕಲಿ ಗೆಸ್ಟ್ ಹೌಸ್ ಹೆಸರಿನಲ್ಲಿ ದೋಖಾ: 97400 ರೂ. ಗುಳುಂ!
Comments are closed.