Post office: ಅಂಚೆ ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ಸೌಲಭ್ಯ!!

Share the Article

Post office: ಇನ್ಮುಂದೆ ಅಂಚೆ ಕಚೇರಿಯ (Post office) ಕೌಂಟರ್ಗಳಲ್ಲಿ ಡಿಜಿಟಲ್ ಪೇಮೆಂಟ್ ಸೌಲಭ್ಯ ಆರಂಭವಾಗುತ್ತಿದೆ. ಇದರೊಂದಿಗೆ ಅಂಚೆ ಕಚೇರಿಯೂ ಯುಪಿಐ ನೆಟ್ವರ್ಕ್ಗೆ ಸೇರ್ಪಡೆಯಾದಂತಾಗಿದೆ. ಯುಪಿಐ ಸಿಸ್ಟಂಗೆ ಜೋಡಿತವಾಗದೇ ಇದ್ದರಿಂದ ಅಂಚೆ ಕಚೇರಿಯಲ್ಲಿ ಡಿಜಿಟಲ್ ಪೇಮೆಂಟ್ ಸ್ವೀಕೃತವಾಗಿರಲಿಲ್ಲ. ಈಗ ಹೊಸ ತಂತ್ರಜ್ಞಾನ ಅಳವಡಿಕೆಯಾಗುತ್ತಿದೆ.

‘ಅಂಚೆ ಇಲಾಖೆಯು ತನ್ನ ಐಟಿ ಇನ್ಸಾಸ್ಟ್ರಕ್ಟರ್ ನ್ನು ಅಳವಡಿಸುತ್ತಿದೆ. ಡೈನಮಿಕ್ ಕ್ಯುಆರ್ ಕೋಡ್ ನೊಂದಿಗೆ ಟ್ರಾನ್ಸಾಕ್ಷನ್ ನಡೆಸಲು ಸಾಧ್ಯವಾಗಿಸುವ ಹೊಸ ಅಪ್ಲಿಕೇಶನ್ಗಳನ್ನು ಇದು ಒಳಗೊಂಡಿರುತ್ತದೆ. ಈ ಅಪ್ಲಿಕೇಶನ್ಗಳಿರುವ ಇಾಸ್ಟ್ರಕ್ಟರ್ ಎಲ್ಲಾ ಅಂಚೆ ಕಚೇರಿಗಳಲ್ಲಿ 2025ರಳಗೆ ಅಳವಡಿಸುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಅಂಚೆ ಇಲಾಖೆಯ ಕರ್ನಾಟಕ ಸರ್ಕಲ್ ನಲ್ಲಿ ಅದರ ಹೊಸ ಐಟಿ ಇನ್ದ್ರಾಸ್ಟ್ರಕ್ಟರ್ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮೈಸೂರು ಮುಖ್ಯ ಅಂಚೆ ಕಚೇರಿ, ಬಾಗಲಕೋಟೆ ಮುಖ್ಯ ಕಚೇರಿ ಹಾಗೂ ಅವುಗಳ ಅಡಿಯಲ್ಲಿ ಬರುವ ಅಂಚೆ ಕಚೇರಿಗಳಲ್ಲಿ ಕ್ಯುಆ‌ರ್ ಕೋಡ್ ಆಧಾರಿತವಾಗಿ ಮೇಲ್ ಮತ್ತು ಪಾರ್ಸಲ್ ಬುಕಿಂಗ್ ಸರ್ವಿಸ್ ಅನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Shefali Jariwala: ನಟಿ ಶೆಫಾಲಿ ಜರಿವಾಲ ಸಾವು ಹೃದಯಾಘಾತದಿಂದ ಅಲ್ಲ: ಪೊಲೀಸರು ಹೇಳಿದ್ದೇನು?

Comments are closed.