Hyderabad : ಮಕ್ಕಳ ಕಾಲೇಜ್ ಫೀಸ್ ಕಟ್ಟಲು ಕಷ್ಟ- ತಮ್ಮದೇ ಅಶ್ಲೀಲ ವಿಡಿಯೋ ಮಾಡಿ ಹಣ ಗಳಿಸುತ್ತಿದ್ದ ದಂಪತಿ ಅರೆಸ್ಟ್

Hyderabad : ತಮ್ಮ ಮಕ್ಕಳ ಕಾಲೇಜ್ ಫೇಸ್ ಕಟ್ಟಲು ದಂಪತಿಯೊಂದು ತಮ್ಮದೇ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಮಾರಾಟ ಮಾಡಿ ಹಣ ಗಳಿಸುತ್ತಿರುವ ಪ್ರಕರಣವನ್ನು ಬೆಳಕಿಗೆ ಬಂದಿದ್ದು ಇದೀಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಹೌದು, ಗುರುವಾರ ಹೈದರಾಬಾದ್ ಅಂಬಾರ್ ಪೇಟ್ ನ ಮಲ್ಲಿಕಾರ್ಜುನ್ ನಗರದ ದಂಪತಿಯನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಮನೆಯಲ್ಲಿದ್ದ ಹೈ ಡೆಫಿನಿಷನ್ ಕ್ಯಾಮರಾಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಬಂಧಿತ ದಂಪತಿ ತಮ್ಮ ಲೈಂಗಿಕ ಕ್ರಿಯೆಗಳ ಲೈವ್ ಮತ್ತು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಆಯಪ್ ಬಳಕೆದಾರರೊಂದಿಗೆ ಹಂಚಿಕೊಳ್ಳುತ್ತಿದ್ದರು. ಲೈವ್ ವೀಡಿಯೊಗೆ 2,000 ರೂ. ಬೆಲೆಯಿದ್ದರೆ, ರೆಕಾರ್ಡ್ ಮಾಡಿದ ಕ್ಲಿಪ್ ಅನ್ನು 500 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಬಂಧಿತರ ವಿಚಾರಣೆ ನಡೆಸಿದಾಗ ದಂಪತಿ ತಮ್ಮ ಹೆಣ್ಣುಮಕ್ಕಳ ಕಾಲೇಜು ಶುಲ್ಕ ಕಟ್ಟಲು ನಾವು ಈ ದಂಧೆ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ
ಗಂಡನೊಬ್ಬನೇ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿ ದುಡಿಯುವುದಕ್ಕಿಂತ ಹೆಚ್ಚು ಹಣವನ್ನು ಈ ಕೃತ್ಯಗಳಿಂದ ದಂಪತಿ ಗಳಿಕೆ ಮಾಡುತ್ತಿದ್ದರು. ತಮ್ಮ ಗುರುತು ಪರಿಚಯ ಬೇರೆಯವರಿಗೆ ಸ್ಥಳೀಯರಿಗೆ ತಿಳಿಯದಂತೆ ಮರೆ ಮಾಚುವುದಕ್ಕಾಗಿ ಈ ಜೋಡಿ ತಮ್ಮ ಮುಖಕ್ಕೆ ಮಾಸ್ಕ್ ಧರಿಸುತ್ತಿದ್ದರು. ತಮ್ಮ ಈ ಕೃತ್ಯಗಳಿಗೆ ಅವರು ಹೆಚ್‌ಡಿ ಕ್ಯಾಮರಾವನ್ನು ಬಳಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Comments are closed.