Home News CC Camera: ಪುಂಡ ಪೋಕರಿಗಳ ಅಡ್ಡಕ್ಕೆ ಬಂತು ಪುರಸಭೆಯ ವತಿಯಿಂದ ಸಿಸಿ ಕ್ಯಾಮರ – ...

CC Camera: ಪುಂಡ ಪೋಕರಿಗಳ ಅಡ್ಡಕ್ಕೆ ಬಂತು ಪುರಸಭೆಯ ವತಿಯಿಂದ ಸಿಸಿ ಕ್ಯಾಮರ – ಅಂತೂ ಒಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಪುರಸಭೆ

Hindu neighbor gifts plot of land

Hindu neighbour gifts land to Muslim journalist

CC Camera: ವಿರಾಜಪೇಟೆಯಲ್ಲಿ ಪುಂಡ ಪೋಕರಿಗಳ ಅಡ್ಡವಾಗಿದ್ದ ಗಡಿಯಾರ ಕಂಬದಿಂದ ಕೆ. ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲುದಾರಿಯಲ್ಲಿ ಸಿಸಿ ಕಣ್ಗಾವಲು. ಮರ ಗಿಡಗಳು ಬೆಳೆದು ನಿಂತಿದ್ದು ಪ್ರತಿದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ದಾರಿಯಲ್ಲಿ ಸಂಚರಿಸುತ್ತಾರೆ, ಆದರೆ ಅಲ್ಲಿ ಪುಂಡ ಪೋಕರಿಗಳ ಸಮಸ್ಯೆಯಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುತ್ತಿತ್ತು.

ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಪ್ರಯತ್ನ ಮಾಡುತ್ತ ಬರುತ್ತಿತ್ತು. ಆದರೆ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿರಲಿಲ್ಲ. ಈ ಸಮಸ್ಯೆಯನ್ನು ಅರಿತ ಪುರಸಭೆಯ ಆಡಳಿತ ಮಂಡಳಿ ಇದೀಗ ಸಿ. ಸಿ. ಕ್ಯಾಮರಾ ಆಳವಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರೆ, ಇದರಿಂದ ಕಾಲುದಾರಿಯಲ್ಲಿ ನಡೆಯುವ ಪ್ರತಿ ಚಲನವಲನಗಳನ್ನು ಸೆರೆ ಹಿಡಿದು ಪುಂಡ ಪೋಕರಿಗಳ ಆಟಕ್ಕೆ ಕಡಿವಾಣ ಹಾಕಬಹುದಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಈ ಮಾರ್ಗವಾಗಿ ಸಂಚಾರಿಸಬಹುದಾಗಿದೆ. ಸಾರ್ವಜನಿಕರು ಇದೀಗ ಒಂದು ಒಳ್ಳೆಯ ಕಾರ್ಯ ಮಾಡಿದ ಪುರಸಭೆಯ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.

ಇಂದು ಸಿ ಸಿ ಕ್ಯಾಮರಾ ಅಳವಡಿಸುವ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆಯ ಅಧ್ಯಕ್ಷರಾದ ಶ್ರೀ ಮತಿ ದೇಚಮ್ಮ ಕಾಳಪ್ಪ ಪುರಸಭೆಯ ವತಿಯಿಂದ ಹಲವಾರು ವರ್ಷಗಳಿಂದ ಸಮಸ್ಯೆಯಾಗುತ್ತಿದೆ. ಕಾಲುದಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡು ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ, ಇದರಿಂದ ಅಕ್ರಮ ಚಟುವಟಿಕೆಗಳು ನಡೆಯುವುದನ್ನು ಧ್ವನಿ ಸಮೇತ ಸೆರೆ ಹಿಡಿಯಲಾಗುತ್ತದೆ. ಪುರಸಭೆಯ ಮುಖ್ಯ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದರ ನಿರ್ವಹಣೆ ಮಾಡುತ್ತಾರೆ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರಾದ ಎಸ್.ಎಚ್ ಮತೀನ್.ಮಹಮ್ಮದ್ ರಾಫಿ‌. ನಗರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಪುರಸಭೆಯ ಆರೋಗ್ಯ ಅಧಿಕಾರಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಹಾಜರಿದ್ದರು,

ಇದನ್ನೂ ಓದಿ;Mangaluru: ಮಂಗಳೂರು: ಖೈದಿಗಳ ನಡುವೆ ಹೊಡೆದಾಟ: ಓರ್ವ ಆಸ್ಪತ್ರೆಗೆ ದಾಖಲು!