High court: ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್

High court: ಕೆ ಆರ್ ಎಸ್ ಡ್ಯಾಮ್ ಬಳಿ ಕಾವೇರಿ ಆರತಿ ಹಾಗೂ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನ ಪಾರ್ಕ್ ನಿರ್ಮಾಣದ ಕುರಿತಾಗಿ ಇದೀಗ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಈ ಕುರಿತಾಗಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಪರವಾಗಿ ಅರ್ಜಿ ಒಂದು ಸಲ್ಲಿಕೆಯಾಗಿದ್ದು, ಡ್ಯಾಮ್ ಬಳಿ 120 ಅಡಿಯ ಕಾವೇರಿ ಮೂರ್ತಿ ನಿರ್ಮಾಣವಾಗಲಿದ್ದು ಇದಕ್ಕೆ ಯಂತ್ರಗಳ ಬಳಕೆಯಾಗುತ್ತಿದೆ ಇದರಿಂದ ಪರಿಸರಕ್ಕೆ ಡ್ಯಾಮ್ ಗೆ ಹಾನಿ ಆಗುವುದಿಲ್ಲವೇ ಎಂದು ಫೋಟೋ ಸಮೇತ ಪ್ರಶ್ನಿಸಲಾಗಿದೆ.
ಹಾಗೂ ಜಲ ಸುರಕ್ಷಾ ಸಮಿತಿಯ ಅನುಮತಿ ಪಡೆದುಕೊಳ್ಳಲಾಗಿದೆಯೇ? ಮತ್ತು ಇದಕ್ಕೆ ತಜ್ಞರ ಸಲಹೆ ಇದೆಯೆ? ಎಂದು ಕೋರ್ಟ್ ಪ್ರಶ್ನಿಸಿದ್ದು ಇದಕ್ಕೆ ಎರಡು ವಾರದೊಳಗೆ ಉತ್ತರ ನೀಡಬೇಕು ಎಂದು ನೋಟಿಸ್ ನೀಡಿದೆ.
ಇದನ್ನೂ ಓದಿ;Kolkata: ಕೊಲ್ಕತ್ತಾದಲ್ಲಿ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯ ಮೇಲೆ ಅತ್ಯಾಚಾರ
Comments are closed.